ಬೆಂಗಳೂರು: ನಗರದ ಶಾಮನೂರು ಶಿವಶಂಕರಪ್ಪ ಆಸ್ಪತ್ರೆಗೆ ದಾಖಲಾಗಿರುವ ಕೊರೊನಾ ಸೋಂಕಿತರಿಗೆ ಸರಿಯಾದ ಆಹಾರದ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೋವಿಡ್ ಸೋಂಕಿತ ವ್ಯಕ್ತಿಯೋರ್ವ ಈ ಬಗ್ಗೆ ವಿಡಿಯೋ ಮಾಡಿದ್ದಾನೆ.
ಶಾಮನೂರು ಶಿವಶಂಕರಪ್ಪ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಕೊರೊನಾ ಸೋಂಕಿತರ ಆರೋಪ - ಶ್ಯಾಮನೂರು ಶಿವಶಂಕರಪ್ಪ ಆಸ್ಪತ್ರೆ
ರಾಜರಾಜೇಶ್ವರಿನಗರದಲ್ಲಿ ಇರುವ ಎಸ್.ಎಸ್.ಆಸ್ಪತ್ರೆಯಲ್ಲಿ ಬಿಬಿಎಂಪಿಯಿಂದ ಹಲವಾರು ಕೋವಿಡ್ ಪಾಸಿಟಿವ್ ರೋಗಿಗಳು ಶಿಫ್ಟ್ ಆಗಿದ್ದಾರೆ. ಆಸ್ಪತ್ರೆಯಲ್ಲಿ ಶುಚಿತ್ವ ಇಲ್ಲ, ಸರಿಯಾದ ಊಟ, ತಿಂಡಿ ನೀಡುವುದಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಕೊರೊನಾ ಸೋಂಕಿತರ ಆರೋಪ
ರಾಜರಾಜೇಶ್ವರಿನಗರದಲ್ಲಿರುವ ಎಸ್.ಎಸ್.ಆಸ್ಪತ್ರೆಯಲ್ಲಿ ಬಿಬಿಎಂಪಿಯಿಂದ ಹಲವಾರು ಕೋವಿಡ್ ಪಾಸಿಟಿವ್ ರೋಗಿಗಳು ಶಿಫ್ಟ್ ಆಗಿದ್ದಾರೆ. ಆಸ್ಪತ್ರೆಯಲ್ಲಿ ಶುಚಿತ್ವ ಇಲ್ಲ, ಸರಿಯಾದ ಊಟ, ತಿಂಡಿ ನೀಡುವುದಿಲ್ಲ. ಆಹಾರವು ಅತಿಯಾದ ಉಪ್ಪಿನಿಂದ ಕೂಡಿರುತ್ತದೆ. ಪ್ರಮಾಣವೂ ಕಡಿಮೆಯಾಗಿದ್ದು, ಹೊಟ್ಟೆ ತುಂಬುತ್ತಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ.
ಬಿಬಿಎಂಪಿಯಿಂದ ಶಿಫ್ಟ್ ಆದ ಪ್ರತಿ ರೋಗಿಗಳಿಗೆ ಸರ್ಕಾರದಿಂದ ಇಂತಿಷ್ಟು ಎಂಬಂತೆ ಹಣ ವಸೂಲಿ ಮಾಡಲಾಗುತ್ತದೆ. ಆದರೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನೂ ನೀಡುತ್ತಿಲ್ಲ ಎಂದು ಸೋಂಕಿತರು ಬೇಸರ ವ್ಯಕ್ತಪಡಿಸಿದ್ದಾರೆ.
Last Updated : Aug 27, 2020, 6:45 AM IST