ಬೆಂಗಳೂರು :ವಿದ್ಯುತ್ ಬಸ್ ಖರೀದಿ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ. ಕೇವಲ ಗುತ್ತಿಗೆ ಆಧಾರದಲ್ಲಿ ವಿದ್ಯುತ್ ಬಸ್ಗಳ ಪ್ರಾಯೋಗಿಕ ಸಂಚಾರಕ್ಕೆ ಮುಂದಾಗಿದ್ದೇವೆ. ಅದರ ಫಲಿತಾಂಶ ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಮಹಾಂತೇಶ್ ಕವಠಗಿಮಠ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವರೂ ಆದ ಸವದಿ, ವಿದ್ಯುತ್ ಬಸ್ ಖರೀದಿ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ. ಈ ಬಗ್ಗೆ ಮುಂದಿನ ದಿನದಲ್ಲಿ ಚಿಂತನೆ ಮಾಡಲಿದ್ದೇವೆ. ಆದರೆ, ಮಾಲಿನ್ಯ ವಿಪರೀತ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಇದೆ.
ಹಾಗಾಗಿ, ಕೇಂದ್ರ ಸರ್ಕಾರ ಒಂದು ಬಸ್ಗೆ 55 ಲಕ್ಷ ಸಬ್ಸಿಡಿ ಕೊಡುತ್ತಿದೆ. ಪ್ರಾಯೋಗಿಕವಾಗಿ 300 ಬಸ್ ಓಡಿಸಲು ಅನುಮತಿ ಕೊಡಲಾಗಿದೆ. ಆದರೆ, ನಾವು ಬಸ್ ಖರೀದಿ ಮಾಡುತ್ತಿಲ್ಲ. ಕಿಲೋಮೀಟರ್ ಆಧಾರದಲ್ಲಿ ಬಸ್ ಗುತ್ತಿಗೆ ಪಡೆಯಲಿದ್ದೇವೆ. ಇದಕ್ಕಾಗಿ ಟೆಂಡರ್ ಕರೆದಿದ್ದು, ಹೆಚ್ಚು ದರ ನಮೂದು ಮಾಡಿದ ಕಾರಣ ನಾಲ್ಕು ಬಾರಿ ತಿರಸ್ಕರಿಸಿದ್ದೇವೆ.