ಬೆಂಗಳೂರು :ನವೆಂಬರ್ 30 ರಂದು ಅಂದರೆ ನಾಳೆ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಇದು 2020ರ ಕೊನೆಯ ಗ್ರಹಣ.
ನೆಹರೂ ತಾರಾಲಯದ ಪರಿಣಿತರಿಂದ ಚಂದ್ರಗ್ರಣದ ಕುರಿತು ಸ್ಪಷ್ಟನೆ.. ಇದನ್ನ ಛಾಯಾ ಚಂದ್ರಗ್ರಹಣ ಅಂತಲೂ ಕರೆಯಲಾಗುತ್ತೆ. ಸೂರ್ಯ ಮತ್ತು ಚಂದ್ರನ ಮಧ್ಯೆ ಬರುವ ಖಗೋಳ ಪ್ರಕ್ರಿಯೆಯನ್ನ ಚಂದ್ರಗ್ರಹಣ ಅಂತಾ ಕರೆಯಲಾಗುತ್ತೆ. ಈ ಗ್ರಹಣಕ್ಕೆ ವೈಜ್ಞಾನಿಕವಾಗಿ ಪೆನಂಬ್ರಲ್ ಗ್ರಹಣ ಅಂತಾ ಕರೆಯಲಾಗುತ್ತೆ. ಈ ಗ್ರಹಣ ಭಾರತದಲ್ಲಿ ಗೋಚರಿಸಲ್ಲ. ಯಾಕೆಂದರೆ, ಗ್ರಹಣವಾಗುವ ಸಮಯ ಭಾರತದಲ್ಲಿ ಸೂರ್ಯೋದಯವಾಗಿರುತ್ತದೆ.
ನೆಹರೂ ತಾರಾಲಯದ ಸಿಬ್ಬಂದಿ ಹೇಳುವ ಪ್ರಕಾರ ನಾಳೆ ಮಧ್ಯಾಹ್ನ 1ಗಂಟೆಗೆ ಆರಂಭವಾಗಿ ಸಂಜೆ 5.30ರ ವೇಳೆಗೆ ಮುಕ್ತಾಯವಾಗಲಿದೆ. ಈ ಗ್ರಹಣದ ಸ್ಪರ್ಶ ಕಾಲ ಮಧ್ಯಾಹ್ನ 1.02ಕ್ಕೆ, ಮಧ್ಯಕಾಲ ಮಧ್ಯಾಹ್ನ 3.12ಕ್ಕೆ, ಮೋಕ್ಷ ಕಾಲ ಸಂಜೆ 5.20ಕ್ಕೆ ಮುಗಿಯಲಿದೆ.
ವಿಜ್ಞಾನದ ಪ್ರಕಾರ ಈ ಪೆನಂಬ್ರಲ್ ಗ್ರಹಣದಿಂದ ಯಾವುದೇ ಸಮಸ್ಯೆ ಅಥವಾ ಹಾನಿ ಇಲ್ಲ. ಗ್ರಹಣವು ಸ್ಪಷ್ಟವಾಗಿ ಗೋಚರಿಸುವುದು ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಹಾಗೂ ದಕ್ಷಿಣ ಅಮೆರಿಕಾದಲ್ಲಿ ಮಾತ್ರ. ಚಂದ್ರಗ್ರಹಣ ನಮ್ಮ ಭಾರತದಲ್ಲಿ ಗೋಚರವಾಗುವ ಸಮಯಲ್ಲಿ ಸೂರ್ಯ ಉದಯಿಸಿರುತ್ತಾನೆ. ಹೀಗಾಗಿ ನಮ್ಮಲ್ಲಿ ಗ್ರಹಣದ ಆಚರಣೆಯ ಅವಶ್ಯಕತೆ ಇರೋದಿಲ್ಲ ಅಂತಾ ನೆಹರೂ ತಾರಾಲಯದ ವೈಜ್ಞಾನಿಕ ಅಧಿಕಾರಿ ಆನಂದ್ ತಿಳಿಸಿದ್ದಾರೆ.
ಇದನ್ನೂ ಓದಿ:ನಾಳೆ ಸಂಭವಿಸಲಿದೆ ಅರೆಛಾಯಾ ಚಂದ್ರಗ್ರಹಣ: ಭಾರತಕ್ಕೆ ಗೋಚರ ಇಲ್ಲ