ಬೆಂಗಳೂರು: ಜಾಲಹಳ್ಳಿ ವಾಯುನೆಲೆ ಪ್ರದೇಶದ ಮೇಲೆ ರಾತ್ರಿ ವೇಳೆ ಡ್ರೋನ್ ಹಾರಾಟವಾಗಿಲ್ಲ. ಈ ಕುರಿತು ಕಳೆದ 15 ದಿನಗಳಿಂದಲ ನಿಗಾ ವಹಿಸಿದರೂ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಸ್ಪಷ್ಟಪಡಿಸಿದ್ದಾರೆ.
ಜಾಲಹಳ್ಳಿ ವಾಯುನೆಲೆ ಮೇಲೆ ಯಾವುದೇ ಡ್ರೋನ್ ಹಾರಾಟವಾಗಿಲ್ಲ: ಡಿಸಿಪಿ ಸ್ಪಷ್ಟನೆ
ಜಾಲಹಳ್ಳಿ ವಾಯುನೆಲೆ ಮೇಲೆ ಯಾವುದೇ ರೀತಿಯ ಡ್ರೋನ್ ಹಾರಾಟವಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ರಾತ್ರಿ ವೇಳೆ ಡ್ರೋನ್ ರೀತಿಯ ವಸ್ತು ಹಾರಾಟವಾಗುತ್ತಿದೆ ಎಂದು ಪೊಲೀಸರಿಗೆ ಏರ್ ಫೋರ್ಸ್ ಅಧಿಕಾರಿಗಳು ದೂರು ನೀಡಿದ್ದರು. ಈ ದೂರಿನನ್ವಯ 15 ದಿನಗಳಿಂದಲೂ ವಾಯುನೆಲೆ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ರಾತ್ರಿ ವೇಳೆ ಗಸ್ತು ತಿರುಗಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಡ್ರೋನ್ ಹಾರಾಟದ ಬಗ್ಗೆ ನಿಖರ ಮಾಹಿತಿ ದೊರೆತಿಲ್ಲ. ಪರಿಶೀಲನೆ ವೇಳೆ ವಿಮಾನದ ಲೈಟ್ ಕಾಣಿಸಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ವಾಯುನೆಲೆ ಅಧಿಕಾರಿಗಳು ಹೇಳಿದಂತಹ ಸಮಯದಲ್ಲಿ ಯಾವುದೇ ಖಾಸಗಿ ಏಜೆನ್ಸಿಯ ಡ್ರೋನ್ ಸಹ ಹಾರಾಟವಾಗಿಲ್ಲ. ಸುತ್ತಮುತ್ತಲಿನ ಅಪಾರ್ಟ್ಮೆಂಟ್ ಹಾಗೂ ಏರಿಯಾಗಳಲ್ಲಿಯೂ ಪರಿಶೀಲನೆ ನಡೆಸಲಾಗಿದ್ದು, ಎಲ್ಲಿಯೂ ಡ್ರೋನ್ ಪತ್ತೆಯಾಗಿಲ್ಲ ಎಂದರು.