ಕರ್ನಾಟಕ

karnataka

ETV Bharat / state

ಇಂದಿನಿಂದ ಮಧ್ಯಾಹ್ನದ ಕೊರೊನಾ ಹೆಲ್ತ್ ಬುಲೆಟಿನ್ ಇರಲ್ಲ: ಆರೋಗ್ಯ ಇಲಾಖೆಯ ಟಾಸ್ಕ್ ಫೋರ್ಸ್ ನಿರ್ಧಾರ - ಕೊರೊನಾ ಹೆಲ್ತ್ ಬುಲೇಟಿನ್ ಇಲ್ಲ ಆರೋಗ್ಯ ಇಲಾಖೆ ನಿರ್ಧಾರ

ಇಂದಿನಿಂದ ಆರೋಗ್ಯ ಇಲಾಖೆಯಿಂದ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಇರುವುದಿಲ್ಲ. ಒಂದೇ ಸಲ ಸಂಜೆ ಮಾತ್ರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಕೊರೊನಾ ಹೆಲ್ತ್ ಬುಲೇಟಿನ್ ಇಲ್ಲ ಆರೋಗ್ಯ ಇಲಾಖೆ ನಿರ್ಧಾರ, No Coronal Health Bulletin from Health Department
ಇಂದಿನಿಂದ ಮಧ್ಯಾಹ್ನದ ಕೊರೊನಾ ಹೆಲ್ತ್ ಬುಲೇಟಿನ್ ಇರೋದಿಲ್ಲ: ಆರೋಗ್ಯ ಇಲಾಖೆಯ ಟಾಸ್ಕ್ ಫೋರ್ಸ್ ತೀರ್ಮಾನ

By

Published : May 30, 2020, 12:34 PM IST

ಬೆಂಗಳೂರು: ರಾಜ್ಯದಲ್ಲಿ ಮೇ ತಿಂಗಳಲ್ಲಿ ಕೊರೊನಾ ಹರಡುವಿಕೆ ಊಹೆಗೂ ಮೀರಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರ ಮಾಹಿತಿ ಸಂಗ್ರಹಿಸಿ ಮಾಧ್ಯಮಗಳಿಗೆ ನೀಡಲು ಕಷ್ಟವಾಗುತ್ತಿದೆ. ಹೀಗಾಗಿ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ನಿಲ್ಲಿಸಲು ಆರೋಗ್ಯ ಇಲಾಖೆ ಟಸ್ಕ್ ಪೋರ್ಸ್ ನಿರ್ಧರಿಸಿದೆ.

ಇಂದಿನಿಂದಲೇ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಆರೋಗ್ಯ ಇಲಾಖೆ ನಿಲ್ಲಿಸಿದ್ದು, ಒಂದೇ ಸಲ ಸಂಜೆ ಮಾತ್ರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದೆ. ಇಡೀ ದೇಶದಲ್ಲಿ ಬೆರಳೆಣಿಕೆಯಷ್ಟೇ ರಾಜ್ಯಗಳ ಆರೋಗ್ಯ ಇಲಾಖೆಗಳು ಬುಲೆಟಿನ್ ರಿಲೀಸ್ ಮಾಡುತ್ತಿದ್ದವು. ಇದೀಗ ಮೇ ತಿಂಗಳಲ್ಲಿ ದಿಢೀರ್ ಕೊರೊನಾ ಪ್ರಕರಣಗಳು ಏರಿಕೆ ಆಗುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲರ ಮಾಹಿತಿ ಸಂಗ್ರಹಿಸಿ ಮಾಧ್ಯಮಗಳಿಗೆ ನೀಡಲು ಕಷ್ಟವಾಗುತ್ತಿದೆ. ಹೀಗಾಗಿ ದಿನದಲ್ಲಿ ಸಂಜೆ ಒಂದೇ ಸಲ ಬುಲೆಟಿನ್ ರಿಲೀಸ್ ಮಾಡಲು ಆರೋಗ್ಯ ಇಲಾಖೆ ಟಸ್ಕ್ ಫೋರ್ಸ್ ನಿರ್ಧರಿಸಿದೆ.

For All Latest Updates

ABOUT THE AUTHOR

...view details