ಬೆಂಗಳೂರು: ನಗರದಲ್ಲಿ 39 ವಾರ್ಡ್ಗಳಲ್ಲಿ ಕಂಟೇನ್ಮೆಂಟ್ ಪ್ರದೇಶಗಳಿವೆ. ನಿತ್ಯ ಹೊಸ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದಂತೆ ಆ ಪ್ರದೇಶವನ್ನು ಕಂಟೇನ್ಮೆಂಟ್ ಮಾಡಲಾಗುತ್ತದೆ. ಆದ್ರೆ ಇಲ್ಲಿ ನಿತ್ಯ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಾರೆ. ಇವರಿಗೆ ಕಾಲಕಾಲಕ್ಕೆ ಕೊರೊನಾ ಸೋಂಕು ಪರೀಕ್ಷೆ ನಡೆಸುತ್ತಿಲ್ಲ.
ಪೌರಕಾರ್ಮಿಕರಿಗೆ ಕೊರೊನಾ ಪರೀಕ್ಷಿಸಲು ಆರೋಗ್ಯ ಇಲಾಖೆಯಿಂದ ಯಾವುದೇ ನಿರ್ದೇಶನ ಇಲ್ವಂತೆ - ಬೆಂಗಳೂರು ಸುದ್ದಿ
ಪೌರ ಕಾರ್ಮಿಕರಿಗೆ ಕೊರೊನಾ ಪರೀಕ್ಷೆ ಮಾಡಲು ಸರ್ಕಾರದ ಆರೋಗ್ಯ ಇಲಾಖೆಯಿಂದ ಯಾವುದೇ ನಿರ್ದೇಶನವೂ ಇಲ್ಲ. ಆದರೆ, ಅತ್ಯಂತ ಸುರಕ್ಷತೆಯಿಂದ ಕೆಲಸ ಮಾಡಲು ವ್ಯವಸ್ಥೆ ಮಾಡಲಾಗಿದೆ.,
ಈ ಬಗ್ಗೆ ಮಾತನಾಡಿದ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್, ಪೌರಕಾರ್ಮಿಕರಿಗೆ ಟೆಸ್ಟಿಂಗ್ ಬಗ್ಗೆ ನಾವು ನಿರ್ಧಾರ ಮಾಡಲು ಸಾಧ್ಯ ಇಲ್ಲ. ಪಾಸಿಟಿವ್ ಬಂದ್ರೆ ಅವರ ಸಂಪರ್ಕಿತರನ್ನು ಟೆಸ್ಟ್ ಮಾಡಬೇಕು ಎಂಬ ಸೂಚನೆ ಇದೆ. ಆದರೆ ಪೌರಕಾರ್ಮಿಕರಿಗೆ ಕಾಲಕಾಲಕ್ಕೆ ಗಂಟಲು ದ್ರವ ಪರೀಕ್ಷೆ ನಡೆಸಲು ಸೂಚನೆ ಇಲ್ಲ. ಆದರೆ, ಅತ್ಯಂತ ಸುರಕ್ಷತೆಯಿಂದ ಕೆಲಸ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಕಂಟೇನ್ಮೆಂಟ್ ವಲಯದಲ್ಲಿ ಪೌರಕಾರ್ಮಿಕರು ಮಾಸ್ಕ್, ಗ್ಲೌಸ್, ಪಿಪಿಇ ಕಿಟ್ ಬಳಸುತ್ತಿದ್ದಾರೆ. ಕಾಂಟ್ರಾಕ್ಟರ್ಗಳು ನಿಯಮ ಪಾಲಿಸದಿದ್ರೆ ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಆರಂಭದಲ್ಲಿ ಪೌರಕಾರ್ಮಿಕರ ಕುಟುಂಬಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿತ್ತು. ಈಗ ಅದು ಕೂಡ ಸ್ಥಗಿತಗೊಳಿಸಲಾಗಿದೆ ಎಂದು ವಿಶೇಷ ಆಯುಕ್ತ ರಂದೀಪ್ ತಿಳಿಸಿದರು.