ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಟ್ಟಿಲ್ಲ: ಸಚಿವ ಡಾ.ಕೆ.ಸುಧಾಕರ್ - ಆಕ್ಸಿಜನ್ ಕೊರತೆಯಿಂದ‌ ಸಾವು

ಸರ್ಕಾರ ಯಾರಿಗೂ ಪರಿಹಾರ ಕೊಟ್ಟಿಲ್ಲ. ತನಿಖಾ ವರದಿ ಬಂದ ಮೇಲೆ ಪರಿಹಾರ ಕೊಡ್ತೀವಿ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

sudhakar
sudhakar

By

Published : Jul 22, 2021, 9:53 PM IST

ಬೆಂಗಳೂರು:ಚಾಮರಾಜನಗರದಲ್ಲಿ ಮೃತಪಟ್ಟವರಿಗೆ ಪರಿಹಾರವನ್ನೇ ಕೊಟ್ಟಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರ ಯಾರಿಗೂ ಪರಿಹಾರ ಕೊಟ್ಟಿಲ್ಲ. ತನಿಖಾ ವರದಿ ಬಂದ ಮೇಲೆ ಪರಿಹಾರ ಕೊಡ್ತೀವಿ ಎಂದು ಹೇಳಿದರು.

ಆಕ್ಸಿಜನ್ ಕೊರತೆಯಿಂದ‌ ಯಾರೂ ಮೃತಪಟ್ಟಿಲ್ಲ ಎಂದು ಸಂಸತ್​ನಲ್ಲಿ‌ ಕೇಂದ್ರದ ಉತ್ತರ ವಿಚಾರವಾಗಿ ಮಾತನಾಡುತ್ತಾ, ಆಕ್ಸಿಜನ್ ಕೊರತೆಯಿಂದ ಮರಣ ಹೊಂದಿದ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ತನಿಖೆಯ ವರದಿ ಬರೋವರೆಗೂ ನಾವು ಏನನ್ನೂ ಹೇಳಬಾರದು. ಯಾಕೆಂದರೆ ನ್ಯಾಯಾಂಗ ಸಮಿತಿಯು ತನಿಖೆ ಮಾಡುತ್ತಿದೆ. ಈ ತನಿಖಾ ವರದಿ ಬಂದ ಬಳಿಕ ಕೇಂದ್ರಕ್ಕೆ ವರದಿ ಕೊಡಲಾಗುತ್ತದೆ ಎಂದರು.

ಚಾಮರಾಜನಗರ ದುರಂತದಲ್ಲಿ ಮಡಿದವರಿಗೆ ಈಗಾಗಲೇ 2 ಲಕ್ಷ ಪರಿಹಾರ ಕೊಟ್ಟಿದೆ. ಮೇ 22ರಂದು 24 ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಕೊಡಲಾಗಿದೆ. ಬಳಿಕ ಜುಲೈ 6 ರಂದು ಪರಿಹಾರ ಮೊತ್ತ 5 ಲಕ್ಷ‌ ಕೊಡಲು ಹೈಕೋರ್ಟ್ ಆದೇಶಿಸಿತ್ತು. ಇಷ್ಟಾದರೂ ಪರಿಹಾರ ಕೊಟ್ಟೇ ಇಲ್ಲ ಅಂತ ಸುಧಾಕರ್ ಹೇಳಿಕೆ ಕೊಟ್ಟಿರುವುದು ಅಚ್ಚರಿ ಮೂಡಿಸಿದೆ.

ABOUT THE AUTHOR

...view details