ಹೊಸಕೋಟೆ: ರಾಜ್ಯದಲ್ಲಿ ಮುಖ್ಯ ಮಂತ್ರಿ ಸ್ಥಾನ ಖಾಲಿ ಇಲ್ಲ, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ. ನಾಯಕತ್ವ ಬದಲಾವಣೆ ಮಾಡುವ ವಿಚಾರವಾಗಿ ಹೈಕಮಾಂಡ್ ಯಾವುದೇ ತಲೆಕೆಡಿಸಿಕೊಂಡಿಲ್ಲ ಎಂದು ಸಂಸದ ಬಿಎನ್ ಬಚ್ಚೇಗೌಡ ತಿಳಿಸಿದ್ದಾರೆ.
ಹೊಸಕೋಟೆ ನಗರದ ಕೊರೊನಾ ವಾರಿಯರ್ಸ್‌ಗಳಿಗೆ ನಗರಸಭೆ ಆವರಣದಲ್ಲಿ 25 ಕೆ.ಜಿ ಅಕ್ಕಿ , ದಿನಸಿ ಪದಾರ್ಥಗಳು , ತರಕಾರಿಗಳು , ಹಣ್ಣುಗಳು , ಒಂದು ಕೋಳಿ ಹಾಗೂ 25 ಕೋಳಿ ಮೊಟ್ಟೆಗಳನ್ನು ಒಳಗೊಂಡ ದಿನಸಿ ಪದಾರ್ಥಗಳ ಕಿಟ್ಗಳನ್ನು ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡ ಅವರ ಜೊತೆಯಲ್ಲಿ ವಿತರಿಸಿ ಮಾತನಾಡಿದತರು.
ಮುಂದಿನ ಎರಡು ವರ್ಷಗಳ ಕಾಲ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ. ನಾಯಕತ್ವ ಬದಲಾವಣೆ ಮಾಡುವುದರ ಬಗ್ಗೆ ಹೈಕಮಾಂಡ್ ಯಾವುದೇ ತಲೆಕೆಡಿಸಿಕೊಂಡಿಲ್ಲ. ಮಂತ್ರಿ ಮಂಡಲದ ಒಬ್ಬ ಸಚಿವ ದೆಹಲಿಗೆ ಹೋಗಿ ಬಂದಾಕ್ಷಣ ಇದೆಲ್ಲ ಆಗುವ ಕೆಲಸವಲ್ಲ ಎಂದು ತಿಳಿಸಿದರು.
ಮಾತು ಮುಂದುವರಿಸಿ ಕೋವಿಡ್ ಮೊದಲನೇ ಅಲೆ ಸಂದರ್ಭದಲ್ಲಿ ಸಹ ಪೌರಕಾರ್ಮಿಕರು ಹಾಗೂ ಆಶಾಕಾರ್ಯಕರ್ತರಿಗೆ ಆಹಾರ ಪದಾರ್ಥಗಳ ಕಿಟ್ಗಳನ್ನು ವಿತರಣೆ ಮಾಡಿದ್ದೆವು. ಈ ಬಾರಿಯೂ ಎರಡೆನೇ ಅಲೆ ಸಂದರ್ಭದಲ್ಲಿ ಸಹ ಕೊರೊನಾ ವಾರಿಯರ್ಸ್‌ಗಳಿಗೆ ಸುಮಾರು ಮೂರು ಸಾವಿರ ರೂಪಾಯಿ ಮೌಲ್ಯದ ಪೌಷ್ಠಿಕ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದ್ದೆವೆ.