ಕರ್ನಾಟಕ

karnataka

ETV Bharat / state

ಕೋವಿಡ್ ಆಸ್ಪತ್ರೆನೋ ಕಸದ ಕೊಂಪೆಯೋ; ಈ ಹಾಸ್ಪಿಟಲ್​​​ನಲ್ಲಿ ಸ್ವಚ್ಛತೆ ಮಾತ್ರ ಕೇಳಲೇಬೇಡಿ! - ಕ್ವಾರಂಟೈನ್ ಕೇಂದ್ರ

ಆನೇಕಲ್ ಸುತ್ತಮುತ್ತಲ ಪಾಸಿಟಿವ್ ಕೇಸ್​ಗಳ ಹಾಗೂ ಕ್ವಾರಂಟೈನ್ ಮಾಡುವ ಯಡವನಹಳ್ಳಿ ಆಕ್ಷ್​ಫರ್ಡ್ ಆಸ್ಪತ್ರೆಯಲ್ಲಿನ ಈ ಕರಾಳ ವಾಸ್ತವಕ್ಕೆ ರೋಗಿಗಳು ದಂಗಾಗಿದ್ದಾರೆ.

Covid Hospital Anekal
ಕೋವಿಡ್ ಆಸ್ಪತ್ರೆ

By

Published : Jul 18, 2020, 9:59 AM IST

ಆನೇಕಲ್:ಜಗತ್ತಿನಲ್ಲಿ ಆರೋಗ್ಯದ ಮಹತ್ವ ಈಗೀಗ ಅರ್ಥವಾದಂತಿದೆ. ಆರೋಗ್ಯವೇ ಭಾಗ್ಯ ಎನ್ನುವ ಈ ಕಾಲದಲ್ಲಿ ಸ್ವಚ್ಚತೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆದ್ರೆ ಈ ಆಸ್ಪತ್ರೆಯಲ್ಲಿ ಅದ್ಯಾವುದೂ ಇಲ್ಲ.

ಆಸ್ಪತ್ರೆಯಲ್ಲಿ ರಾಶಿ ಬಿದ್ದಿರುವ ಕಸದ ರಾಶಿ

ಆನೇಕಲ್ ಸುತ್ತಮುತ್ತಲ ಪಾಸಿಟಿವ್ ಕೇಸ್​ಗಳ ಹಾಗೂ ಕ್ವಾರಂಟೈನ್ ಮಾಡುವ ಯಡವನಹಳ್ಳಿ ಆಕ್ಸ್​​​​ಫರ್ಡ್​​ ಆಸ್ಪತ್ರೆಯಲ್ಲಿನ ಈ ಕರಾಳ ವಾಸ್ತವಕ್ಕೆ ರೋಗಿಗಳು ದಂಗಾಗಿದ್ದಾರೆ. ಸ್ವಚ್ಛತೆಗೂ ಈ ಆಸ್ಪತ್ರೆಗೂ ಸಂಬಂಧವೇ ಇಲ್ಲದಂತಿದೆ ಇಲ್ಲಿನ ಪರಿಸ್ಥಿತಿ. ಕಸ, ಗಲೀಜು ಕಣ್ಣಿಗೆ ರಾಚುವಂತೆ ರಾಶಿ ಬಿದ್ದಿದೆ.

ಇನ್ನು ಇದೇ ವಿಚಾರವಾಗಿ ಸಾಕಷ್ಟು ದಿನಗಳಿಂದ ಇಂತಹ ಒಂದು ಚರ್ಚೆಗೆ ಗುರಿಯಾಗಿರುವ ಆಸ್ಪತ್ರೆ ಇದಾಗಿದ್ದು, ಸುತ್ತಮುತ್ತಲ ಹೊರ - ಒಳರೋಗಿಗಳಿಗೆ ಆಸ್ಪತ್ರೆಯ ಬಗ್ಗೆ ತಾತ್ಸಾರ ಮೂಡುವಂತಾಗಿದೆ. ತಿಂದಂತಹ ತಿಂಡಿ, ಊಟದ ವೇಸ್ಟ್​ಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ. ಒಳರೋಗಿಯ ಕೊಠಡಿಯ ಪಕ್ಕದಲ್ಲಿಯೇ ಕಸದ‌ ರಾಶಿ ರಾಶಿ ಗೋಚರಿಸುತ್ತಿದೆ.

ABOUT THE AUTHOR

...view details