ಬೆಂಗಳೂರು :ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಶುಕ್ರವಾರ ಯಾವುದೇ ಬದಲಾವಣೆ ಆಗಿಲ್ಲ. ದೇಶದಾದ್ಯಂತ ಕಳೆದ 15 ದಿನಗಳಿಂದ ತೈಲ ಬೆಲೆ ಯಥಾಸ್ಥಿತಿ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 111.11 ಮತ್ತು ಸ್ಪೀಡ್ ಪೆಟ್ರೋಲ್ ಬೆಲೆ 114.06 ರೂ. ಇದೆ. ಪ್ರತಿ ಲೀಟರ್ ಡೀಸೆಲ್ 94.81 ರೂ. ದರ ಇದೆ.
ರಾಜ್ಯ-ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ದರ ಹೀಗಿದೆ.. - ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಶುಕ್ರವಾರ ಯಾವುದೇ ಬದಲಾವಣೆ ಆಗಿಲ್ಲ. ಕಳೆದ 15 ದಿನಗಳಿಂದ ತೈಲ ಬೆಲೆ ಯಥಾಸ್ಥಿತಿ ಮುಂದುವರೆರಿದೆ..
ತೈಲ ಬೆಲೆ ಯಥಾಸ್ಥಿತಿ
ಬೆಂಗಳೂರು ಹೊರತು ಪಡಿಸಿದ ರಾಜ್ಯದ ಪ್ರಮುಖ ನಗರಗಳ ಪೈಕಿ ಮಂಗಳೂರಿನಲ್ಲಿ ಪೆಟ್ರೋಲ್ (110.30 ರೂ.), ಡಿಸೇಲ್ (94.04 ರೂ.), ಮೈಸೂರಿನಲ್ಲಿ ಪೆಟ್ರೋಲ್ (110.59 ರೂ.), ಡೀಸೆಲ್ (94.34 ರೂ.), ದಾವಣಗೆರೆಯಲ್ಲಿಪೆಟ್ರೋಲ್ (112.86 ರೂ.), ಡಿಸೇಲ್ (96.54 ರೂ.), ಬೆಳಗಾವಿಯಲ್ಲಿ ಪೆಟ್ರೋಲ್ (110 ರೂ.), ಡೀಸೆಲ್ (95 ರೂ.) ಹಾಗೂ ಹುಬ್ಬಳ್ಳಿಯಲ್ಲಿ ಪೆಟ್ರೋಲ್ (110.81 ರೂ.) ಮತ್ತು ಡೀಸೆಲ್ ದರ 94.56 ರೂ. ಇದೆ.
ದೇಶದ ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಹೀಗಿದೆ. (ಒಂದು ಲೀಟರ್ಗೆ.. ರೂಪಾಯಿಗಳಲ್ಲಿ..):
ಮಹಾನಗರಗಳು | ಪೆಟ್ರೋಲ್ ದರ | ಡೀಸೆಲ್ ದರ |
ನವದೆಹಲಿ | 105.41 | 96.67 |
ಮುಂಬೈ | 120.51 | 104.77 |
ಕೋಲ್ಕತ್ತಾ | 115.12 | 99.83 |
ಚೆನ್ನೈ | 110.85 | 100.94 |
ಭೋಪಾಲ್ | 118.14 | 101.16 |
ಹೈದರಾಬಾದ್ | 119.49 | 105.49 |