ಬೆಂಗಳೂರು:ಸಿಲಿಕಾನ್ ಸಿಟಿಯ ನಾಗರಿಕರಿಗೆ ಇಂದು ಹಾಗೂ ನಾಳೆ ಸೋಮವಾರ ಕಾವೇರಿ ನೀರು ಸರಬರಾಜು ಇರುವುದಿಲ್ಲ.
ಬೆಂಗಳೂರಿಗರಿಗೆ ಇಂದು, ನಾಳೆ ಕಾವೇರಿ ನೀರು ಸಿಗಲ್ಲ! - undefined
ಜಲಮಂಡಳಿಯಲ್ಲಿ ಎರಡು ದಿನ ನಡೆಯುವ ತಾಂತ್ರಿಕ ಕಾಮಗಾರಿ ಮತ್ತು ದುರಸ್ತಿ ಹಿನ್ನೆಲೆಯಲ್ಲಿ ನಗರಾದ್ಯಂತ ಕಾವೇರಿ ನೀರಿನ ಪೂರೈಕೆ ಸ್ಥಗಿತಗೊಳಿಸಲಾಗಿದೆ.

ನಾಳೆ ಕಾವೇರಿ ನೀರು ಸ್ಥಗಿತ!
ಎರಡು ದಿನ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗುವುದರಿಂದ ನೀರನ್ನು ಮಿತವಾಗಿ ಬಳಸುವುದು ಹಾಗೂ ಸಂಗ್ರಹಿಸಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ.
ನಗರದ ಹೊರವಲಯದ ಟಿ.ಕೆ ಹಳ್ಳಿ, ಹಾರೋಹಳ್ಳಿ, ತಾತಗುಣಿ ಕಾವೇರಿ ನೀರು ಸರಬರಾಜು ಯೋಜನೆಯ ನೀರು ಪಂಪಿಂಗ್ ಸಿಸ್ಟಮ್ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಇದರಿಂದ ಕಾವೇರಿ 1, 2, 3 ಹಾಗೂ ನಾಲ್ಕನೇ ಹಂತದ 1 ಮತ್ತು 3 ನೇ ಘಟಕದ ಪಂಪಿಂಗ್ ಸಿಸ್ಟಮ್ ಸಹ ಇರುವುದಿಲ್ಲ. ಆದ್ದರಿಂದ ನಗರಾದ್ಯಂತ ಕಾವೇರಿ ಕುಡಿಯುವ ನೀರಿನ ಪೂರೈಕೆ ಇರುವುದಿಲ್ಲ ಎಂದು ಜಲ ಮಂಡಳಿ ತಿಳಿಸಿದೆ.