ಬೆಂಗಳೂರು: ದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕೆಲ ಆಯುಷ್ ಚಿಕಿತ್ಸಾ ಸಂಸ್ಥೆಗಳು ಹಾಗೂ ಔಷಧ ತಯಾರಕರು ಮತ್ತು ಮಾರಾಟಗಾರರು ಅನಗತ್ಯ ಲಾಭ ಪಡೆಯಲು ಜಾಹೀರಾತು ನೀಡುತ್ತಿದ್ದಾರೆ.
ಕೋವಿಡ್: ಯಾವುದೇ ಆಯುಷ್ ಚಿಕಿತ್ಸೆ- ಔಷಧಗಳ ಜಾಹೀರಾತು ಪ್ರಸಾರ ಮಾಡುವಂತಿಲ್ಲ..! - AYUSH drugs
ರಾಜ್ಯ ಆಯುಷ್ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಈ ರೀತಿ ಪ್ರಸಾರ ಮತ್ತು ಪ್ರಕಟವಾಗುವ ಆಕ್ಷೇಪಾರ್ಹ ಜಾಹೀರಾತುಗಳು ಔಷಧ ಮತ್ತು ಮ್ಯಾಜಿಕ್ ರಮಿಡಿಸ್ ಆಕ್ಷೇಪಾರ್ಹ ಜಾಹೀರಾತು ನಿಯಮಗಳು 1954 ಮತ್ತು ಅದರಡಿಯ ನಿಯಮಗಳ ಹಾಗೂ NCMA (National Disaster Management Authority) 2005 ರ ಉಲ್ಲಂಘನೆಯಾಗಲಿದೆ.

ಜಾಹೀರಾತುಗಳನ್ನು ನೋಡಿದ ಜನರು, ಯಾವುದೇ ಅರಿವಿಲ್ಲದೆ ಸ್ವತಃ ಔಷಧ ಪ್ರಯೋಗಗಳನ್ನು ಮಾಡಿಕೊಳ್ಳುವ ಸಂಭವವಿದೆ. ಇದು ರೋಗವನ್ನು ಗಂಭೀರತೆ ಕಡೆಗೆ ಕರೆದೊಯ್ಯುವ ಆತಂಕವಿರುವ ಕಾರಣಕ್ಕೆ ಹಾಗೂ ರೋಗಿಗಳಲ್ಲಿ ಹುಸಿ ಭದ್ರತೆ ( pseudo security) ಕಲ್ಪನೆಯಿಂದ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರಲಿದೆ. ಇಂತಹವುಗಳನ್ನು ನಿಯಂತ್ರಿಸಲು ಭಾರತ ಸರ್ಕಾರದ ಆಯುಷ್ ಮಂತ್ರಾಲಯ ಈಗಾಗಲೇ ಆದೇಶ ಹೊರಡಿಸಿದೆ. ಆ ಪ್ರಕಾರ ಇದೀಗ ರಾಜ್ಯ ಆಯುಷ್ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಈ ರೀತಿ ಪ್ರಸಾರ ಮತ್ತು ಪ್ರಕಟವಾಗುವ ಆಕ್ಷೇಪಾರ್ಹ ಜಾಹೀರಾತುಗಳು ಔಷಧ ಮತ್ತು ಮ್ಯಾಜಿಕ್ ರಮಿಡಿಸ್ ಆಕ್ಷೇಪಾರ್ಹ ಜಾಹೀರಾತು ನಿಯಮಗಳು 1954 ಮತ್ತು ಅದರಡಿಯ ನಿಯಮಗಳ ಹಾಗೂ NCMA (National Disaster Management Authority) 2005 ರ ಉಲ್ಲಂಘನೆಯಾಗಲಿದೆ.
ಹೀಗಾಗಿ, ಎಲ್ಲಾ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಿಗೆ ಕೋವಿಡ್-19 ರೋಗದ ಕುರಿತು ಯಾವುದೇ ಆಯುಷ್ ಚಿಕಿತ್ಸೆ ಮತ್ತು ಆಯುಷ್ ಔಷಧಗಳ ಕುರಿತು ಆಕ್ಷೇಪಾರ್ಹ ಜಾಹೀರಾತುಗಳನ್ನು ಪ್ರಕಟ ಮತ್ತು ಪ್ರಸಾರ ಮಾಡದಂತೆ ಆದೇಶಿಸಿದೆ.