ಕರ್ನಾಟಕ

karnataka

ETV Bharat / state

ಸುಪ್ರೀಂಕೋರ್ಟ್‌ನಲ್ಲಿ ಆರಂಭವಾಗದ ವಿಚಾರಣೆ.. ರಮೇಶ್ ನಿವಾಸದಲ್ಲಿ ಕಾಣದ ಚಟುವಟಿಕೆ - ರಮೇಶ್ ನಿವಾಸ

ಸ್ಪೀಕರ್ ರಮೇಶ್ ಕುಮಾರ್ ಕೈಗೊಂಡ ಐತಿಹಾಸಿಕ ನಿರ್ಧಾರದ ಪರಿಣಾಮ ಅನರ್ಹತೆಗೆ ಒಳಗಾಗಿರುವ 17 ಶಾಸಕರು ಈ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇದರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ವಿಳಂಬ ಮಾಡುತ್ತಿದೆ. ಇದು ಶಾಸಕರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ರಮೇಶ್ ಜಾರಕಿಹೊಳಿ ನಿವಾಸ

By

Published : Aug 18, 2019, 8:21 PM IST

ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಕೈಗೊಂಡ ಐತಿಹಾಸಿಕ ನಿರ್ಧಾರದ ಪರಿಣಾಮ ಅನರ್ಹತೆಗೆ ಒಳಗಾಗಿರುವ 17 ಶಾಸಕರು ಈ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ಇದರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ವಿಳಂಬವಾಗ್ತಿದೆ. ಇದು ಅನರ್ಹ ಶಾಸಕರಲ್ಲಿ ಸಹಜವಾಗಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಕಾಣದ ಚಟುವಟಿಕೆ..

ಒಂದು ವಾರದ ಹಿಂದಿನವರೆಗೂ ಚಟುವಟಿಕೆ ಕೇಂದ್ರವಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೆವೆನ್ ಮಿನಿಸ್ಟರ್ಸ್ ಕ್ವಾಟರ್ಸ್ ನಿವಾಸ, ಇದೀಗ ಬಿಕೋ ಎನ್ನುತ್ತಿದೆ. ಅನರ್ಹ ಶಾಸಕರು ಒಂದೆಡೆ ಸೇರಿ ಸಭೆ ನಡೆಸಲು ನಿರ್ಧರಿಸಿದ್ದರು. ಆದರೆ, ಇದಕ್ಕೂ ಇನ್ನೂ ಕಾಲ ಕೂಡಿ ಬಂದಿಲ್ಲ.

ಅತೃಪ್ತರ ಪ್ರಮುಖ ಚಟುವಟಿಕೆ ಕೇಂದ್ರವಾಗಿದ್ದ ರಮೇಶ್ ನಿವಾಸ ಈ ವಿಚಾರದಲ್ಲಿ ಈಗ ನಿರೀಕ್ಷಿತ ಮಟ್ಟದ ಚಟುವಟಿಕೆ ಕಾಣದೆ ಸೊರಗಿದ್ದು ಈ ಬಗ್ಗೆ ಈಟಿವಿ ಭಾರತಪ್ರತಿನಿಧಿ ನಡೆಸಿದ ವಾಕ್ ಥ್ರೂ ಇಲ್ಲಿದೆ.

ABOUT THE AUTHOR

...view details