ಬೆಂಗಳೂರು :ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾಗಾಗಿಯೇ ಪ್ರತ್ಯೇಕ ಕಟ್ಟಡದಲ್ಲಿ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಭೇಟಿ ನೀಡಿದರು. ಎಲ್ಲವನ್ನು ಪರಿಶೀಲಿಸಿದ ಅವರು ಕೋವಿಡ್-19ಗಾಗಿ 750 ಹಾಸಿಗೆಯನ್ನ ಸೀಮಿತಗೊಳ್ಳಿಸಲಾಗಿದೆ. 40 ಹಾಸಿಗೆಗಳಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. ಐಸಿಯು ಬೆಡ್ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು.
ವಿಕ್ಟೋರಿಯಾದಲ್ಲಿ ಕೊರೊನಾಗಾಗಿಯೇ 750 ಹಾಸಿಗೆಯ ವ್ಯವಸ್ಥೆ.. ಸಚಿವ ಡಾ. ಕೆ ಸುಧಾಕರ್ - Njanjanagudu and Gauribidanur under Red Zone list
ನಂಜನಗೂಡು ಮತ್ತು ಗೌರಿಬಿದನೂರು ರೆಡ್ ಝೋನ್ ಪಟ್ಟಿಗೆ ಸೇರಿಸಲಾಗಿದೆ. ವಿಕ್ಟೋರಿಯಾ ಪಕ್ಕದಲ್ಲೇ ಇರುವ ಟ್ರಾಮಾ ಸೆಂಟರ್ನಲ್ಲಿ 22 ಜನ ಸೋಂಕಿತರನ್ನ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ನಂಜಗೂಡಿನಲ್ಲಿ ಆ ಪ್ರಮಾಣದ ಸೋಂಕು ತಗುಲಲಿದೆ ಎಂಬುದನ್ನ ಅಂದಾಜಿಸಿರಲಿಲ್ಲ. ಆದರೆ, ಈಗ ದಿನೇದಿನೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ನಂಜನಗೂಡು ಮತ್ತು ಗೌರಿಬಿದನೂರು ರೆಡ್ ಝೋನ್ ಪಟ್ಟಿಗೆ ಸೇರಿಸಲಾಗಿದೆ. ವಿಕ್ಟೋರಿಯಾ ಪಕ್ಕದಲ್ಲೇ ಇರುವ ಟ್ರಾಮಾ ಸೆಂಟರ್ನಲ್ಲಿ 22 ಜನ ಸೋಂಕಿತರನ್ನ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಂಕಿತರಿಗೆ ಉತ್ತಮ ಗುಣಮಟ್ಟದ ಪೌಷ್ಠಿಕ ಆಹಾರವನ್ನ ನೀಡಲಾಗುತ್ತಿದೆ. ಜೊತೆಗೆ ತಾಜ್ ಹೋಟೆಲ್ ಸೇರಿ ಹಲವು ಹೋಟೆಲ್‌ಗಳಿಂದ ವೈದ್ಯರಿಗೆ, ನರ್ಸ್ಗಳಿಗೂ ಎನ್‌ಜಿಒಗಳುಪೌಷ್ಠಿಕ ಆಹಾರದ ವ್ಯವಸ್ಥೆ ಮಾಡುತ್ತಿವೆ ಎಂದರು. ಸೋಮವಾರ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಲ್ಯಾಬ್ಗಳಲ್ಲಿ ಎಷ್ಟು ಟೆಸ್ಟ್ ಮಾಡಲಾಗುತ್ತೆ ಎಂಬುದರ ಬಗ್ಗೆ ಚರ್ಚೆ ಮಾಡಲಾಗುತ್ತೆ ಎಂದು ಸಚಿವ ಸುಧಾಕರ್ ತಿಳಿಸಿದರು.