ಕರ್ನಾಟಕ

karnataka

ETV Bharat / state

ಅಮೆರಿಕಾದಲ್ಲಿ 'ಕೈಲಾಸ'ವನ್ನೇ ನಿರ್ಮಿಸಿದ ನಿತ್ಯಾನಂದ!

ಕರ್ನಾಟಕದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಡದಿ ಸ್ವಾಮಿ, ಈಕ್ವೆಡಾರ್​ನಲ್ಲಿ ಖರೀದಿಸಿರುವ ದ್ವೀಪಕ್ಕೆ ಕೈಲಾಸ ಎಂದು ನಾಮಕರಣ ಮಾಡಿ, ಅದಕ್ಕೆ ಸ್ವಂತ ಧ್ವಜ, ಲಾಂಛನ ಪಾಸ್ಪೋರ್ಟ್ ಕೂಡ ಸಿದ್ದಪಡಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

nithyananda establishes his own nation
nithyananda establishes his own nation

By

Published : Dec 4, 2019, 2:34 AM IST

Updated : Dec 4, 2019, 7:34 AM IST

ಬೆಂಗಳೂರು:ದೇಶಬಿಟ್ಟು ವಿದೇಶಕ್ಕೆ ಪಲಾಯನ ಮಾಡಿರುವ ಬಿಡದಿ ಆಶ್ರಮದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಲ್ಯಾಟಿನ್ ಅಮೆರಿಕಾ ಬಳಿಯಿರುವ ಈಕ್ವೆಡಾರ್​ ಬಳಿ ದ್ವೀಪವೊಂದನ್ನು ಖರೀದಿಸಿ ಅಲ್ಲಿ ಹೊಸ ರಾಷ್ಟ್ರ ಸ್ಥಾಪಿಸಿದ್ದಾನೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಡದಿ ಸ್ವಾಮಿ, ಈಕ್ವೆಡಾರ್​ನಲ್ಲಿ ಖರೀದಿಸಿರುವ ದ್ವೀಪಕ್ಕೆ ಕೈಲಾಸ ಎಂದು ನಾಮಕರಣ ಮಾಡಿ, ಅದಕ್ಕೆ ಸ್ವಂತ ಧ್ವಜ, ಲಾಂಛನ ಪಾಸ್ಪೋರ್ಟ್ ಕೂಡ ಸಿದ್ದಪಡಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

ಇನ್ನು www.kailaasa.org ಎಂಬ ವೆಬ್​ಸೈಟ್​ಕೂಡ ಸ್ಥಾಪಿಸಿದ್ದು, ಅದರಲ್ಲಿ ಇದೊಂದು ಹಿಂದೂ ರಾಷ್ಟ್ರ ಎಂದು ನಮೂದಿಸಲಾಗಿದೆ. ಈ ರಾಷ್ಟ್ರದಲ್ಲಿ ಉಚಿತ ವೈದ್ಯಕೀಯ, ಗುರುಕುಲದ ಶಿಕ್ಷಣ ಹಾಗೂ ಉಚಿತ ಊಟದ ವ್ಯವಸ್ಥೆ ನೀಡುವುದಾಗಿ ವೆಬ್​ಸೈಟ್​ ಪ್ರಕಟಣೆ ಹೊರಡಿಸಿದೆ. ಇದರ ಜೊತೆಗೆ ವೆಬ್​ಸೈಟ್​ನಲ್ಲಿ ಯಾವುದೇ ದೇಶದ ನಿವಾಸಿಗಳು ಹಿಂದೂ ಧರ್ಮ ಪಾಲಿಸಬೇಕಾದರೆ ಅಲ್ಲಿಗೆ ಬರಬಹುದು ಎಂದು ಉಲ್ಲೇಖಿಸಿದ್ದು, ಡೊನೇಷನ್​ ನೀಡುವಂತೆ ಕೇಳಿಕೊಳ್ಳಲಾಗಿದೆ!.

ಕೆಲ ದಿನಗಳ ಹಿಂದೆಯೇ ನಿತ್ಯಾನಂದ ಈಕ್ವೆಡಾರ್ ರಾಷ್ಟ್ರಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದರು. ಆದರೆ ಮೂಲಗಳ ಪ್ರಕಾರ ಬಿಡದಿ ಸ್ವಾಮಿ ಭಾರತ ಬಿಟ್ಟು ಒಂದು ವರ್ಷ ಮೇಲಾಯಿತು ಎಂದು ಹೇಳುತ್ತಿವೆ. ಆದರೆ ಪಾಸ್ಪೋರ್ಟ್​ ಇಲ್ಲದ ನಿತ್ಯಾನಂದ ಹೇಗೆ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಇನ್ನು ನಿತ್ಯಾನಂದನ ಬಳಿ ಕೆಲಸ ಮಾಡಿಕೊಂಡಿದ್ದ ಸ್ಥಳೀಯರನ್ನು ವಿಚಾರಿಸಿದರೆ ಸುಮಾರು ಒಂದು ವರ್ಷದಿಂದ ನಿತ್ಯಾನಂದನನ್ನು ನೋಡಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

Last Updated : Dec 4, 2019, 7:34 AM IST

ABOUT THE AUTHOR

...view details