ಕರ್ನಾಟಕ

karnataka

ETV Bharat / state

ಯೆಸ್ ಬ್ಯಾಂಕ್​ನಲ್ಲಿ 712 ಕೋಟಿ ರೂ. ಸಾಲ ಪಡೆದು ವಂಚನೆ: ನಿತೇಶ್ ಎಸ್ಟೇಟ್ ಕಂಪನಿ ವಿರುದ್ಧ ಪ್ರಕರಣ - Nitesh Estate Company has cheated Yes Bank news

ಯೆಸ್ ಬ್ಯಾಂಕ್​ನಲ್ಲಿ ಸಾಲ ಪಡೆದು ವಂಚಿಸಿದ ಆರೋಪದಡಿ ನಿತೇಶ್ ಎಸ್ಟೇಟ್ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದ್ದು ಆರೋಪಿತರಿಗೆ ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ.

Nitesh Estate Company
ಯೆಸ್ ಬ್ಯಾಂಕ್​ನಲ್ಲಿ 712 ಕೋಟಿ ರೂ. ಸಾಲ ಪಡೆದು ವಂಚನೆ

By

Published : Jul 6, 2021, 4:08 PM IST

ಬೆಂಗಳೂರು: ವಿವಿಧ ಯೋಜನೆಗಳ ಹೆಸರಿನಲ್ಲಿ ಬ್ಯಾಂಕ್​ನಿಂದ ಸುಮಾರು 712 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿದ ಆರೋಪದಡಿ ನಿತೇಶ್ ಎಸ್ಟೇಟ್ ಕಂಪನಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೆಸ್ ಬ್ಯಾಂಕ್​ನ ಮುಂಬೈ ಶಾಖೆ ಅಧಿಕಾರಿ ಆಶೀಶ್ ವಿನೋದ ಜೋಶಿ ಎಂಬುವವರು ನೀಡಿದ ದೂರಿನ ಮೇರೆಗೆ ನಿತೇಶ್ ಸಮೂಹ ಕಂಪನಿ ವಿರುದ್ಧ ಕಬ್ಬನ್‌ಪಾರ್ಕ್‌ ಪೊಲೀಸರು‌ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿತೇಶ್ ಎಸ್ಟೇಟ್, ನಿತೇಶ್ ಹೌಸಿಂಗ್ ಡೆವಲಪ್ ಮೆಂಟ್, ನಿತೀಶ್ ಅರ್ಬನ್‌ ಡೆವಲಪ್‌‌ಮೆಂಟ್ ಕಂಪನಿ ಹೆಸರಿನಲ್ಲಿ ಮುಂಬೈ ಹಾಗೂ ಬೆಂಗಳೂರಿನ‌ ಕಸ್ತೂರಬಾ ರಸ್ತೆಯಲ್ಲಿರುವ ಯೆಸ್ ಬ್ಯಾಂಕ್​ನಲ್ಲಿ‌ ಹಣಕಾಸು ವ್ಯವಹಾರ ನಡೆಸಿತ್ತು.

ತಮ್ಮ ಕಂಪನಿಗಳ ಯೋಜನೆಗಳಾದ ಹೈಡ್ ಪಾರ್ಕ್, ಕೊಲಂಬಸ್ ಸ್ಕ್ವೇರ್, ಪೀಷರ್ ದ್ವೀಪ, ನ್ಯೂ ಥಣಿಸಂದ್ರ ಸೇರಿದಂತೆ ವಿವಿಧ ಪ್ರಾಜೆಕ್ಟ್ ಹೆಸರಿನಲ್ಲಿ ಅಭಿವೃದ್ಧಿ‌ ನಿರ್ಮಾಣ ಮಾಡುವುದಾಗಿ ಹೇಳಿ ಬ್ಯಾಂಕ್​ನಿಂದ ಹಂತ-ಹಂತವಾಗಿ ಸುಮಾರು 712 ಕೋಟಿ ರೂಪಾಯಿ ಪಡೆದಿದೆ. ಹಣ ಹಿಂತಿರುಗಿಸುವುದಾಗಿ ಹೇಳಿ ಒಪ್ಪಂದದ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಜೋಶಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿತರಿಗೆ ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ.

For All Latest Updates

TAGGED:

ABOUT THE AUTHOR

...view details