ಬೆಂಗಳೂರು:1993ರಲ್ಲಿ ಕನ್ನಡ ಚಿತ್ರರಂಗದಲ್ಲಿ ತೆರೆ ಕಂಡು ಸೂಪರ್ ಹಿಟ್ ಸಾಲಿನಲ್ಲಿ ಮಿಂಚಿ, ಹಲವು ಹೊಸ ಪ್ರತಿಭೆಗಳನ್ನು ಹುಟ್ಟು ಹಾಕಿದ 'ನಿಷ್ಕರ್ಷ' ಸಿನಿಮಾ ಸೆಪ್ಟಂಬರ್ 20 ಮತ್ತೆ ಸೆಟ್ ಏರಲಿದೆ. ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಆಕ್ಷನ್ ಕಟ್ ಹೇಳಿ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಥ್ರಿಲ್ಲರ್ ಕಥೆ ಆಧರಿತ ಸಿನಿಮಾ ಇದಾಗಿದ್ದು, ವಿಷ್ಣುವರ್ಧನ್ ಜನ್ಮ ದಿನದ ಪ್ರಯುಕ್ತ ನಿರ್ಮಾಪಕ, ನಟ ಬಿ.ಸಿ.ಪಾಟೀಲ್ ರೀ-ರಿಲೀಸ್ ಮಾಡುತ್ತಿದ್ದಾರೆ.
ವಿಷ್ಣುವರ್ಧನ್ ಅಭಿನಯದ 'ನಿಷ್ಕರ್ಷ' ರೀ-ರಿಲೀಸ್... ಹಿಂದಿ, ಕನ್ನಡದಲ್ಲಿ ತೆರೆ ಮೇಲೆ! - kannada films
ಸೆಪ್ಟಂಬರ್ 20ರಂದು ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಬರೋಬ್ಬರಿ 100 ಚಿತ್ರ ಮಂದಿರಗಳಲ್ಲಿ ನಿಷ್ಕರ್ಷ ಸಿನಿಮಾ ಮತ್ತೆ ಬಿಡುಗಡೆಯಾಗಲಿದೆ ಎಂದು ನಟ, ನಿರ್ಮಾಪಕ ಬಿ.ಸಿ.ಪಾಟೀಲ್ ತಿಳಿಸಿದರು.
2 ದಶಕಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ನಿಷ್ಕರ್ಷ, ಬರೋಬ್ಬರಿ ₹ 60 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು. ನಿರ್ಮಾಪಕ ಬಿ.ಸಿ.ಪಾಟೀಲ್ ಅವರು 6 ತಿಂಗಳ ಸತತ ಪರಿಶ್ರಮದಿಂದ ಆಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲ್ ಸೌಂಡ್ನೊಂದಿಗೆ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಬರೋಬ್ಬರಿ 100 ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.
ಬಿ.ಸಿ.ಪಾಟೀಲ್, ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಹಾಗೂ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡುವ ಮೂಲಕ ಗಮನ ಸೆಳೆದ ಸುಮನ್ ನಗರಕರ್ ಮತ್ತು ಈ ಸಿನಿಮಾ ಮೂಲಕ ಖಳ ನಟನಾಗಿ ಎಂಟ್ರಿ ಕೊಟ್ಟ ಸಂಗೀತ ನಿರ್ದೇಶಕ ಗುರುಕಿರಣ್, ಸೃಷ್ಠಿ ಪಾಟೀಲ್ ಹಾಗೂ ಅಳಿಯ ನಿಷ್ಕರ್ಷ ಸಿನಿಮಾದ ಸಕ್ಸಸ್ ಕಹಾನಿಯನ್ನು ಇದೀಗ ಮೆಲುಕು ಹಾಕಿದ್ದರು.1 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಲು ಮತ್ತೆ ಬರುತ್ತಿದೆ.