ಬೆಂಗಳೂರು: ಅಮೆರಿಕ ಮತ್ತು ಭಾರತದ ಬಾಂಧವ್ಯ ಬೆಸೆಯುವ ಪ್ರಮುಖ ಹೆಜ್ಜೆಯಾಗಿ ನಾಸಾ ಹಾಗು ಇಸ್ರೋ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ನಿಸಾರ್ ಉಪಗ್ರಹ ಅಮೆರಿಕನ್ ವಾಯುಪಡೆಯ ವಿಮಾನದಲ್ಲಿ ಕ್ಯಾಲಿಫೋರ್ನಿಯಾದಿಂದ ಹೊರಟು ಗುರುವಾರ ಬೆಂಗಳೂರಿಗೆ ಬಂದಿಳಿದಿದೆ. ಭೂಮಿಯ ಹೊರ ಪದರ ಮತ್ತು ಹಿಮದ ಮೇಲ್ಮೈ ಬದಲಾವಣೆಗಳನ್ನು ಅಳೆಯಲು ಈ ಉಪ್ರಗಹವನ್ನು ನಾಸಾ ಮತ್ತು ಇಸ್ರೋ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ನಿಸಾರ್ ಉಪಗ್ರಹವು ಪರಿಸರ ವ್ಯವಸ್ಥೆಗಳಲ್ಲಿನ ಬದಲಾವಣೆಗಳನ್ನು ಅಳೆಯುತ್ತದೆ. ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು, ಸಮುದ್ರ ಮಟ್ಟದ ಏರಿಕೆ ಮುಂತಾದ ನೈಸರ್ಗಿಕ ವಿಕೋಪಗಳ ಎಚ್ಚರಿಕೆ ಚಿಹ್ನೆಗಳನ್ನು ಸಹ ನೀಡುತ್ತದೆ.
ಇದನ್ನೂ ಓದಿ:ಚಂದ್ರಯಾನ್ -3: ಪ್ರಮುಖ ರಾಕೆಟ್ ಎಂಜಿನ್ ಟೆಸ್ಟ್ ಯಶಸ್ವಿಯಾಗಿ ನಡೆಸಿದ ಇಸ್ರೋ
ಭೂಕುಸಿತ ಪೀಡಿತ ಪ್ರದೇಶಗಳ ಮೇಲೆ ನಿಗಾ: ನಾಸಾ ನೀಡಿದ ಮಾಹಿತಿ ಪ್ರಕಾರ, ಈ ಉಪಗ್ರಹ L-ಬ್ಯಾಂಡ್ SAR 24 ಸೆಂ.ಮೀ ತರಂಗಾಂತರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ರೆಡಾರ್ ಸಿಗ್ನಲ್‌ಗಳು ಮತ್ತು ದಟ್ಟ ಅರಣ್ಯದಲ್ಲಿ ಕೂಡ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಮತ್ತು ಭಾರತದ ಬಾಹ್ಯಾಕಾಶ ಸಂಸ್ಥೆ ಭೂಕುಸಿತ ಪೀಡಿತ ಪ್ರದೇಶಗಳಲ್ಲಿನ ಹಿಮನದಿಗಳ ಮೇಲೆ ನಿಗಾ ಇಡಲು ಈ ಉಪಗ್ರಹವನ್ನು ಬಳಸಲಿದೆ. ಇದು ಸುಮಾರು 2,800 ಕೆ.ಜಿ ಭಾರವಿದ್ದು, ಸಿಂಥೆಟಿಕ್ ಅಪರ್ಚರ್ ರೆಡಾರ್ ಉಪಕರಣಗಳನ್ನು ಒಳಗೊಂಡಿದೆ.
ಇದನ್ನೂ ಓದಿ:ಇಸ್ರೋ ಉಪಗ್ರಹಕ್ಕೆ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರು ತಯಾರಿಸಿದ ಚಿಪ್ ಅಳವಡಿಕೆ!
2024ರಲ್ಲಿ ಉಡಾವಣೆ: ಈ ಉಪಗ್ರಹವು ಮೋಡಗಳನ್ನು ಭೇದಿಸುವ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಲೆಕ್ಕಿಸದೆ, ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆ ಹಿಡಿಯಲಿದೆ. 2024 ರಲ್ಲಿ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಉಡಾವಣೆಯಾಗುವ ಸಾಧ್ಯತೆಯಿದೆ. ಈ ಮುಖೇನ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕ ಮತ್ತು ಭಾರತದ ಸಹಭಾಗಿತ್ವ ವೃದ್ಧಿಯಾಗುತ್ತಿದೆ. ನಾಸಾ ಹಾಗೂ ಇಸ್ರೋ ಬಾಹ್ಯಾಕಾಶ ಸಂಸ್ಥೆಗಳು ಪರಸ್ಪರ ಪೂರಕವಾಗಿ ಕೆಲಸ ಮಾಡುವ ಮೂಲಕ ಜಾಗತಿಕವಾಗಿ ಇತರೆ ದೇಶಗಳ ಗಮನ ಸೆಳೆಯುತ್ತಿವೆ.
ಇದನ್ನೂ ಓದಿ:2023ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋದಿಂದ ಮತ್ತಷ್ಟು ಸಾಧನೆ.... ಸಿದ್ಧವಾಗ್ತಿವೆ ಮಹತ್ವದ ಯೋಜನೆಗಳು
ಗಗನಯಾನ್ ಮಿಷನ್: ಸಿಬ್ಬಂದಿ ಮಾಡ್ಯೂಲ್ ಚೇತರಿಕೆ ಪ್ರಯೋಗ ನಡೆಸಿದ ಇಸ್ರೋ
ಇತ್ತೀಚೆಗಿನ ಇಸ್ರೋ ಸಾಧನೆ: ಬಾಹ್ಯಾಕಾಶದಲ್ಲಿ ಉಪಗ್ರಹ ದಟ್ಟಣೆ ಮತ್ತು ತ್ಯಾಜ್ಯ ಹೆಚ್ಚಾಗಿರುವ ಮಧ್ಯೆ ಇಸ್ರೋ ಇತ್ತೀಚೆಗೆ ಮಹತ್ವದ ಸಾಧನೆ ಮಾಡಿದೆ. ಬಾಹ್ಯಾಕಾಶದಲ್ಲಿನ ನಿರುಪಯುಕ್ತ ಉಪಗ್ರಹವೊಂದನ್ನು ಭೂಕಕ್ಷೆಗೆ ತಂದು ಅದನ್ನು ಫೆಸಿಪಿಕ್ ಸಾಗರದಲ್ಲಿ ಬೀಳಿಸುವಲ್ಲಿ ಯಶಸ್ವಿಯಾಗಿದೆ. 2011ರಲ್ಲಿ ಉಷ್ಣ ವಲಯದ ವಾತಾವರಣ ಮತ್ತು ಹವಾಮಾನ ಅಧ್ಯಯನ ಮಾಡಲು ಫ್ರೆಂಚ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಜೊತೆಗೂಡಿ ಉಡಾಯಿಸಲಾಗಿದ್ದ ಉಪಗ್ರಹವಾದ ಮೇಘಾ ಟ್ರೋಪಿಕ್ಸ್-1 (ಎಂಟಿ-1) ಅನ್ನು ಯಶಸ್ವಿಯಾಗಿ ಕೆಳಗಿಳಿಸಿತು. ನಿರೀಕ್ಷಿತ ಅಕ್ಷಾಂಶ ಮತ್ತು ರೇಖಾಂಶದ ಗಡಿಗಳಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಅದನ್ನು ಪತನಗೊಳಿಸಲಾಗಿದೆ. ಇದು ಅತ್ಯಂತ ಸವಾಲಿನ ಕೆಲಸವಾಗಿತ್ತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ನಿರುಪಯಕ್ತ ಉಪಗ್ರಹವನ್ನು ಭೂಮಿಗೆ ಯಶಸ್ವಿಯಾಗಿ ಇಳಿಸಿದ ಇಸ್ರೋ!