ಕಾಂತಾರ ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾ. ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶನ ಮಾಡಿರೋ ಕಾಂತಾರ ಚಿತ್ರವನ್ನ ಸೂಪರ್ ಸ್ಟಾರ್ ರಜನಿಕಾಂತ್, ನಟ ಪ್ರಭಾಸ್, ಸುದೀಪ್, ಧನುಷ್, ರಮ್ಯಾ, ಶಿಲ್ಪಾ ಶೆಟ್ಟಿ, ಕಂಗನಾ ರಾಣಾವತ್ ಸೇರಿದಂತೆ ಮುಂತಾದ ಸೆಲೆಬ್ರಿಟಿಗಳು ಈ ಚಿತ್ರವನ್ನ ನೋಡಿ ಮೆಚ್ಚಿಕೊಂಡಿದ್ದಾರೆ.
ಇದೀಗ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಕನ್ನಡದ ಕಾಂತಾರಕ್ಕೆ ಮನಸೋತಿದ್ದಾರೆ. ಭಾರತದಾದ್ಯಂತ ಸದ್ದು ಮಾಡ್ತಿರುವ ಕಾಂತಾರ ಚಿತ್ರವನ್ನು ಇಂದು ನಿರ್ಮಲಾ ಸೀತಾರಾಮನ್ ನೋಡಿ ಆನಂದಿಸಿದ್ದಾರೆ. ಚಿಕ್ಕಪೇಟೆ ಶಾಸಕ ಗರುಡಚಾರ್ ಅವರಿಗೆ ಕಾಲ್ ಮಾಡಿ ಕಾಂತಾರ ನೋಡವ ಬಗ್ಗೆ ಹೇಳಿದ ಸಚಿವರು ಗರುಡಾ ಮಾಲ್ನ ಐನಾಕ್ಸ್ನಲ್ಲಿ ಚಿತ್ರ ವೀಕ್ಷಣೆ ಮಾಡಿದ್ದಾರೆ.