ಬೆಂಗಳೂರು: ನಗರದ ಪಾದರಾಯನಪುರ ಹಾಗೂ ಹೊಂಗಸಂದ್ರದಲ್ಲಿ ಮತ್ತೆ ಕೊರೊನಾ ತನ್ನ ಅಟ್ಟಹಾಸ ಮೆರೆದಿದ್ದು, ಹೊಂಗಸಂದ್ರದ ವಲಸೆ ಕಾರ್ಮಿಕರಲ್ಲಿ ಮತ್ತೆ ಐವರಿಗೆ ಹಾಗೂ ಪಾದರಾಯನಪುರದ ರ್ಯಾಂಡಮ್ ಚೆಕಪ್ನ ವರದಿಯಲ್ಲಿ ಗರ್ಭಿಣಿ ಸೇರಿದಂತೆ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈಗಾಗಲೇ ಈ ಒಂಭತ್ತು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೊನಾ ಸೋಂಕಿತರ ಸಂಪರ್ಕದಿಂದ ಕ್ವಾರಂಟೈನ್ನಲ್ಲಿ ಇದ್ದ ಈ ಒಂಭತ್ತು ಜನರಿಗೆ ಕೊರೊನಾ ತಗುಲಿದೆ ಎಂದು ತಿಳಿದು ಬಂದಿದೆ.
ಹೊಂಗಸಂದ್ರದಲ್ಲಿ ಇಂದು ಡಿಸ್ಚಾರ್ಜ್ ಆದ 419ನೇ ರೋಗಿಯ ಸಂಪರ್ಕದಿಂದ ಇಂದು ಐದು ಜನರಿಗೆ ಕೊರೊನಾ ಸೋಂಕು ಹರಡಿದ್ದು, ಪಾದರಾಯನಪುರದ ರ್ಯಾಂಡಮ್ ಚೆಕಪ್ನಲ್ಲಿ 20, 40 ಹಾಗೂ 55 ವರ್ಷದ ಮಹಿಳೆಯರಿಗೆ ಹಾಗೂ 19 ವರ್ಷದ ಗರ್ಭಿಣಿಯೋರ್ವಳಿಗೆ ತನ್ನ ಪತಿ 706ನೇ ರೋಗಿಯಿಂದ ಕೊರೊನಾ ಸೋಂಕು ಹರಡಿರುವುದು ದೃಢಪಟ್ಟಿದೆ.
ಇನ್ನು ಇದೇ ವೇಳೆ ಪಾದರಾಯನಪುರದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿರುವುದರಿಂದ ಇಡೀ ವಾರ್ಡ್ ಜನರ ಆರೋಗ್ಯ ತಪಾಸಣೆ ನಡೆಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ.