ಬೆಂಗಳೂರು: ಇತ್ತೀಚೆಗೆ ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ಬರುವ ಚಿನ್ನದಂಗಡಿಗಳಲ್ಲಿ ಕಳ್ಳತನ ಹೆಚ್ಚಾಗುತ್ತಿವೆ. ರಾತ್ರೋ ರಾತ್ರಿ ಅಂಗಡಿ ಬೀಗ ಮುರಿದು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚುವ ಪ್ರವೃತ್ತಿ ಅಧಿಕವಾಗುತ್ತಿವೆ.
ಚಿನ್ನದ ವ್ಯಾಪಾರ ನಡೆಸುತ್ತಿದ್ದ ಗಣೇಶ್ ಎಂಬುವರ ಅಂಗಡಿಯಲ್ಲಿ ಚಿನ್ನ ಕದಿಯಲು ರಾಜಸ್ಥಾನ ಮೂಲದ ಖದೀಮರಿಗೆ ಸುಪಾರಿ ನೀಡಿದ್ದ, ಪ್ರಮುಖ ಆರೋಪಿ ಸೇರಿದಂತೆ 9 ಮಂದಿ ಚೋರರನ್ನು ಹಲಸೂರು ಗೇಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಸುನಿಲ್ ಮಾಲಿ, ರಾಜೇಂದ್ರ ತಿಂಗಲ್, ಧೀರಜ್, ದಿನೇಶ್, ದೇವರಾಮ್ ಸೇರಿದಂತೆ 9 ಆರೋಪಿಗಳನ್ನು ಬಂಧಿಸಿ 24 ಲಕ್ಷ ಮೌಲ್ಯದ ಚಿನ್ನದ ಗಟ್ಟಿ 1 ಲಕ್ಷ ನಗದು ಜಪ್ತಿ ಮಾಡಿಕೊಳ್ಳಲಾಗಿದೆ.
ನಗರ್ತ ಪೇಟೆಯಲ್ಲಿ ಗಣೇಶ್ ಪವಾರ್ ಎಂಬುವರು ಕಳೆದ ಐದು ವರ್ಷಗಳಿಂದ ಚಿನ್ನದ ಅಂಗಡಿ ಇಟ್ಟುಕೊಂಡಿದ್ದರು. ಅಂಗಡಿಯಲ್ಲಿ ನಾಲ್ಕು ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಕಳೆದ ಅಕ್ಟೊಂಬರ್ 10 ರಂದು ಎಂದಿನಂತೆ ಕೆಲಸ ಮುಗಿಸಿ ಶಾಪ್ಗೆ ಬೀಗ ಹಾಕಿ ಹೋಗಿದ್ದರು.
ಮಾರನೇ ದಿನ ಅಂಗಡಿ ತೆರೆಯಲು ಬಂದಾಗ ಅಂಗಡಿಯಲ್ಲಿ ಇಟ್ಟಿದ್ದ 790 ಗ್ರಾಂ ಚಿನ್ನ, 7.55 ಲಕ್ಷ ನಗದು ದೋಚಿ ಕಳ್ಳರು ಪರಾರಿಯಾಗಿದ್ದರು. ಗ್ಯಾಸ್ ಕಟ್ಟರ್ ಬಳಸಿ ಬೀಗ ಒಡೆದು ಖದೀಮರು ಕಳ್ಳತನ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ನಗರ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.
ಕಾಟನ್ ಪೇಟೆಯಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿದ್ದ ಆರೋಪಿ