ಬೆಂಗಳೂರು:ಯುಕೆಯಿಂದ ಬಂದಿರುವ ಪ್ರಯಾಣಿಕರಲ್ಲಿ 14 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಅದು ಕೋವಿಡ್ ರೂಪಾಂತರ ತಳಿಯೋ ಅಲ್ಲವೋ ಎಂಬ ಯಕ್ಷಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಉತ್ತರ ನಾಳೆ ಸಿಗಲಿದೆ.
ಯುಕೆಯ 14 ಪಾಸಿಟಿವ್ ಕೇಸ್ಗಳ ವರದಿ ಸಿದ್ಧಪಡಿಸುತ್ತಿರುವ ನಿಮ್ಹಾನ್ಸ್; ಎಲ್ಲರ ಚಿತ್ತ ಐಸಿಎಂಆರ್ ನತ್ತ - nimhans ready to submit uk returnes kovid report
ಯುಕೆಯಿಂದ ಭಾರತಕ್ಕೆ ಬಂದ 14 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಆದರೆ ಇದು ಕೊರೊನಾದ ರೂಪಾಂತರವೋ ಅಲ್ಲವೋ ಎಂಬುದರ ಬಗ್ಗೆ ನಿಮ್ಹಾನ್ಸ್ ವರದಿ ಸಿದ್ಧಪಡಿಸುತ್ತಿದ್ದು, ನಾಳೆ ICMR ಗೆ ಈ 14 ಜನರ ವರದಿ ಸಲ್ಲಿಸಲಿದೆ.
ಈಗಾಗಲೇ 14 ಜನರ ವರದಿ ಅನೌನ್ಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಪಾಸಿಟಿವ್ ಬಂದಿರುವ 14 ಜನರ ಸ್ಯಾಂಪಲ್ಸ್ ಈಗಾಗಲೇ ನಿಮ್ಹಾನ್ಸ್ ಗೆ ಕಳುಹಿಸಲಾಗಿದ್ದು, ಇದೀಗ ವರದಿಯನ್ನ ಸಿದ್ಧಪಡಿಸಲಾಗುತ್ತಿದೆ. ನಿಮ್ಹಾನ್ಸ್‌ನಲ್ಲಿ ನಡೆಯುತ್ತಿರೋ 14 ಜನರ ಜೆನೆಟಿಕ್ ಸೀಕ್ವೆನ್ಸಿಂಗ್ ಟೆಸ್ಟ್ ರಿಪೋರ್ಟ್ ಅನ್ನು ICMR ಗೆ ಕಳಿಸಲಿದ್ದಾರೆ. ಇನ್ನು ಈಗಾಗಲೇ ಆಯಾ ರಾಜ್ಯಕ್ಕೆ ಐಸಿಎಂಆರ್ ಖಡಕ್ ಸೂಚನೆ ನೀಡಿದ್ದು, ವರದಿ ತಾನೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ನಾಳೆ ವರದಿ ಕಳಿಸಲು ವೈದ್ಯರು ರಿಪೋರ್ಟ್ ರೆಡಿ ಮಾಡ್ತಿದ್ದು, ಮತ್ತೊಮ್ಮೆ ಪರಿಶೀಲನೆ ನಡೆಸಿದ ಬಳಿಕ ಕೊರೊನಾ ರೂಪಾಂತರ ಇದೆಯೋ ಇಲ್ವೋ ಎಂಬ ಅಧಿಕೃತ ಮಾಹಿತಿಯನ್ನು ICMR ನೀಡಲಿದೆ.