ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ನಿಮ್ಹಾನ್ಸ್‌ನಲ್ಲಿ ಫೆ.12 ಮತ್ತು 13ರಂದು ನಿಮ್ಹಾನ್ಸ್ ಕನ್ವೆಷನ್ ಸೆಂಟರ್ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಯೋಜನೆ ಮಾಡಿದೆ.
ನಿಮ್ಹಾನ್ಸ್‌ನಲ್ಲಿ 2 ದಿನದ ನ್ಯಾಷನಲ್ ಸೈನ್ಸ್ ಡೇ.. ಈ ಬಾರಿ ನರವಿಜ್ಞಾನದ ಬಗ್ಗೆ ಚರ್ಚೆ.. - ನಿಮ್ಹಾನ್ಸ್‌ನಲ್ಲಿ ಎರಡು ದಿನದ ನ್ಯಾಷನಲ್ ಸೈನ್ಸ್ ಡೇ
ಟಿವಿಎಸ್ ಗ್ರೂಪ್ ಸಹಯೋಗದಲ್ಲಿ ನ್ಯೂರೊ ಸೈನ್ಸ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಕಾರ್ಯಾಗಾರದಲ್ಲಿ ಸ್ಟ್ರೋಕ್ ಕುರಿತು ಮಾಹಿತಿ ನೀಡಲಾಗುತ್ತಿದೆ. 2018-19ನೇ ಸಾಲಿನಲ್ಲಿ 5.65 ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗಿದೆ. 307 ಸಂಶೋಧನಾ ಯೋಜನೆಗಳು, 857 ಸಂಶೋಧನಾ ವರದಿ ಮಂಡಿಸಲಾಗಿದೆ. ಅಲ್ಲದೇ 543 ಕಾರ್ಯಾಗಾರ, ಶಿಬಿರಗಳನ್ನು ನಡೆಸಲಾಗಿದೆ ಎಂದರು.
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಸ್ಥೆ ನಿರ್ದೇಶಕ ಪ್ರೊ.ಬಿ ಎನ್ ಗಂಗಾಧರ್, ಈ ವರ್ಷವೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತಿದೆ. ಈ ನಿಮಿತ್ತ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಈ ಬಾರಿ ನರವಿಜ್ಞಾನಕ್ಕೆ ಸಂಬಂಧಿಸಿದ ಸಂಗತಿಗಳನ್ನು ಜನರಿಗೆ ಅರ್ಥೈಸಲು ವೈದ್ಯಕೀಯ ವಿದ್ಯಾರ್ಥಿಗಳಿಗೆ ನರ ವಿಜ್ಞಾನದಲ್ಲಿ ಕುತೂಹಲ ಹೆಚ್ಚಿಸಲು ಪ್ರದರ್ಶನ ಆಯೋಜಿಸಲಾಗಿದೆ ಎಂದರು.