ಕರ್ನಾಟಕ

karnataka

ETV Bharat / state

₹50 ಲಕ್ಷ ಹಣ ವಂಚನೆ ಆರೋಪ : ನಟಿ ಸಂಜನಾ ಸಹೋದರಿ ನಿಕ್ಕಿ ಪೊಲೀಸರಿಗೆ ಮೊರೆ - Bengaluru News

ಹಣ ಹೂಡಿಕೆ ಮಾಡಿದ ನಂತರ ಪ್ರತಿ ತಿಂಗಳು ಲಾಭವಾಗಿ ಒಂದು ಲಕ್ಷ ಹಣ ಕೊಟ್ಟಿಲ್ಲ. ಹೂಡಿಕೆ ಮಾಡಿದ 50 ಲಕ್ಷ ರೂ. ಹಿಂದಿರುಗಿಸುತ್ತಿಲ್ಲ ಎಂದು ನಿಖಿಲ್ ಹೆಗ್ಡೆ ವಿರುದ್ಧಿ ನಿಕ್ಕಿ ಗಲ್ರಾನಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿದೆ‌‌.

Nikki galhrani
ಸಹೋದರಿ ನಿಕ್ಕಿ ಗಲ್ರಾನಿ

By

Published : Apr 12, 2021, 2:48 PM IST

ಬೆಂಗಳೂರು :50 ಲಕ್ಷ ರೂಪಾಯಿ ಹೂಡಿಕೆ ಮಾಡಿಕೊಂಡು ಲಾಭದ ಹಣ ಮತ್ತು ಅಸಲಿನ ಹಣ ಕೊಡದೇ ವಂಚಿಸಿರುವುದಾಗಿ ಆರೋಪಿಸಿ ಸ್ಯಾಂಡಲ್​ವುಡ್ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ‌.

ಅಮೃತಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ನಿಖಿಲ್‌ ಹೆಗ್ಡೆ ವಿರುದ್ಧ ಎಫ್ಐಆರ್ ದಾಖಲಾಗಿದೆ.‌ ಕೋರಮಂಗಲದಲ್ಲಿ ಸ್ಮಾಲಿಸ್ ರೆಸ್ಟೊ ಕೆಫೆ ಹೆಸರಿನಲ್ಲಿ ರೆಸ್ಟೋರೆಂಟ್ ನಡೆಸಲು ನಿಖಿಲ್ ಹೆಗ್ಡೆಯೊಂದಿಗೆ ನಿಕ್ಕಿ ಗಲ್ರಾನಿ ಹಣ ಹೂಡಿದ್ದರು.

ಪೋಷಕರ ಸಮ್ಮುಖದಲ್ಲಿ ₹50 ಲಕ್ಷ ಹೂಡಿಕೆ ಮಾಡಿದರೆ ಹೆಚ್ಚುವರಿ ತಿಂಗಳಿಗೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ನಿಖಿಲ್ ಭರವಸೆ ನೀಡಿದ್ದ. ಇದರಂತೆ ಒಡಂಬಡಿಕೆಯಾಗಿತ್ತು. ಇದರಂತೆ 2016ರ ಡಿಸೆಂಬರ್‌ನಲ್ಲಿ ಗಲ್ರಾನಿ ₹50 ಲಕ್ಷ ಹೂಡಿಕೆ ಮಾಡಿದ್ದರು‌‌‌.

ಹಣ ಹೂಡಿಕೆ ಮಾಡಿದ ನಂತರ ಪ್ರತಿ ತಿಂಗಳು ಲಾಭವಾಗಿ ಒಂದು ಲಕ್ಷ ಹಣವನ್ನು ಕೊಟ್ಟಿಲ್ಲ. ಹೂಡಿಕೆ ಮಾಡಿದ 50 ಲಕ್ಷ ರೂ. ಹಿಂದಿರುಗಿಸುತ್ತಿಲ್ಲ ಎಂದು ನಿಖಿಲ್ ಹೆಗ್ಡೆ ವಿರುದ್ಧಿ ನಿಕ್ಕಿ ಗಲ್ರಾನಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿದೆ‌‌.

ABOUT THE AUTHOR

...view details