ಕರ್ನಾಟಕ

karnataka

ETV Bharat / state

'ಲೋಕ' ಬಳಿಕ ವಿಧಾನಸಭೆ ಚುನಾವಣೆಯಲ್ಲೂ ನಿಖಿಲ್​ ಕುಮಾರಸ್ವಾಮಿಗೆ ಸೋಲು - ಚುನಾವಣಾ ಅಖಾಡ 2023

ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ರಾಮನಗರದಲ್ಲಿ ನಿರಾಸೆ ಅನುಭವಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಇಕ್ಬಾಲ್​ ಹುಸೈನ್ ವಿರುದ್ಧ ಸೋಲು ಕಂಡಿದ್ದಾರೆ.

ನಿಖಿಲ್​ ಕುಮಾರಸ್ವಾಮಿಗೆ ಸೋಲು
ನಿಖಿಲ್​ ಕುಮಾರಸ್ವಾಮಿಗೆ ಸೋಲು

By

Published : May 13, 2023, 1:44 PM IST

Updated : May 13, 2023, 2:09 PM IST

ಬೆಂಗಳೂರು:ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರ ಪುತ್ರ, ಜೆಡಿಎಸ್​ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ ರಾಮನಗರ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಿಖಿಲ್​ ಮಂಡ್ಯ ಕ್ಷೇತ್ರದಲ್ಲಿ ನಟ ಅಂಬರೀಶ್​ ಅವರ ಪತ್ನಿ ಸುಮಲತಾ ವಿರುದ್ಧ ಪರಾಭವಗೊಂಡಿದ್ದರು.

ಜೆಡಿಎಸ್​ ಭದ್ರಕೋಟೆ, ಕುಮಾರಸ್ವಾಮಿ ಅವರು ಪ್ರತಿನಿಧಿಸುತ್ತಿದ್ದ ರಾಮನಗರದಲ್ಲಿ ನಿಖಿಲ್​ ಅವರು ಸ್ಪರ್ಧಿಸಿದ್ದರು. ಮಾಜಿ ಸಿಎಂ ತಮ್ಮ ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡಿ ಅವರು ಚನ್ನಪಟ್ಟಣದಿಂದ ಕಣಕ್ಕಿಳಿದಿದ್ದರು. ಆದರೆ, ಕ್ಷೇತ್ರದ ಮತದಾರರು ಮಾತ್ರ ನಿಖಿಲ್​ ಅವರನ್ನು ಗೆಲ್ಲಿಸುವ ಮನಸ್ಸು ಮಾತ್ರ ಮಾಡಿಲ್ಲ.

ರಾಮನಗರ ಕ್ಷೇತ್ರದಲ್ಲಿ ನಿಖಿಲ್​ಗೆ ಕಾಂಗ್ರೆಸ್​ ಅಭ್ಯರ್ಥಿ ಎಚ್​ಎ ಇಕ್ಬಾಲ್​ ಹುಸೈನ್​ ಪ್ರಬಲ ಪೈಪೋಟಿ ನೀಡಿದ್ದರು. ಇಕ್ಬಾಲ್​ 76 ಸಾವಿರ ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ನಿಖಿಲ್​ 65 ಸಾವಿರ ಮತ ಗಳಿಸಿ ಎರಡನೇ ಸ್ಥಾನಿಯಾಗಿ ಸೋಲು ಕಂಡರು.

ಇದಕ್ಕೂ ಮೊದಲು 2018 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ನಿಖಿಲ್​ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್​ ಅವರ ವಿರುದ್ಧ 1,25,876 ಮತಗಳಿಂದ ಸೋಲು ಕಂಡಿದ್ದರು. ಸುಮಲತಾ ಅವರು 7.03 ಲಕ್ಷ ಮತಗಳನ್ನು ಪಡೆದರೆ, 5.77 ಲಕ್ಷ ಮತಗಳನ್ನು ಗಳಿಸಿದ್ದರು.

ಓದಿ:ಮಹೇಶ್ ಕುಮಟಳ್ಳಿ ವಿರುದ್ಧ ಲಕ್ಷ್ಮಣ ಸವದಿ ಜಯಭೇರಿ.. ಜಾರಕಿಹೊಳಿಗೆ ಮುಖಭಂಗ

Last Updated : May 13, 2023, 2:09 PM IST

ABOUT THE AUTHOR

...view details