ಕರ್ನಾಟಕ

karnataka

ETV Bharat / state

ನಾನು ಯಾವ ಸ್ಥಾನಕ್ಕೂ ಅಪೇಕ್ಷೆ ಪಟ್ಟವನಲ್ಲ, ಪಕ್ಷವೇ ನನಗೆ ಒಂದು ಸ್ಥಾನ ಕೊಟ್ಟಿದೆ: ನಿಖಿಲ್ ಕುಮಾರಸ್ವಾಮಿ - nikhil kumaraswami latest news

ನಾನು ಯಾವ ಸ್ಥಾನಕ್ಕೂ ಅಪೇಕ್ಷೆ ಪಟ್ಟವನಲ್ಲ. ಆದರೆ ಪಕ್ಷ ನನಗೆ ಒಂದು ಜವಾಬ್ದಾರಿ ನೀಡಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

nikhil kumaraswami speak about his political journey
ನಾನು ಯಾವ ಸ್ಥಾನಕ್ಕೂ ಅಪೇಕ್ಷೆ ಪಟ್ಟವನಲ್ಲ : ನಿಖಿಲ್ ಕುಮಾರಸ್ವಾಮಿ

By

Published : Nov 28, 2020, 7:34 PM IST

ಬೆಂಗಳೂರು: ನಾನು ಯಾವ ಸ್ಥಾನಕ್ಕೂ ಅಪೇಕ್ಷೆ ಪಟ್ಟವನಲ್ಲ. ಆದರೆ ಪಕ್ಷ ನನಗೆ ಒಂದು ಜವಾಬ್ದಾರಿ ನೀಡಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮುಂಬರುವ ಗ್ರಾಪಂ ಚುನಾವಣೆ, ಪಕ್ಷದ ಬಲವರ್ಧನೆ ಕುರಿತ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ವೈಯಕ್ತಿಕ ಕಾರಣಗಳು, ಮದುವೆ ಇತ್ಯಾದಿಗಳಿಂದ ನಾನು ಪಕ್ಷದ ಕಡೆ ಸ್ವಲ್ಪ ಗಮನ ಕೊಡಲು ಸಾಧ್ಯ ಆಗಲಿಲ್ಲ. ಇನ್ನು ಮುಂದೆ ಯಾವ ರೀತಿಯ ಸಂಘಟನೆ ಮಾಡಬೇಕು ಯೋಜನೆ ಮಾಡುತ್ತೇನೆ. ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ ಎಂದರು.

ನಾನು ಯಾವ ಸ್ಥಾನಕ್ಕೂ ಅಪೇಕ್ಷೆ ಪಟ್ಟವನಲ್ಲ : ನಿಖಿಲ್ ಕುಮಾರಸ್ವಾಮಿ

ಚುನಾವಣೆಯಲ್ಲಿ ಗೆದ್ದರೂ ಸೋತರೂ ನಾವು ಜನರ ನಡುವೆಯೇ ಇದ್ದು ಜನರ ವಿಶ್ವಾಸ ಗಳಿಸುವ ರೀತಿ ಕೆಲಸ ಮಾಡಬೇಕು ಎಂದು ಹೇಳಿದರು.

ಇಂದು ಬಹಳಷ್ಟು ಜನರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡು ಪಕ್ಷ ಸಂಘಟನೆಗೆ ಒತ್ತು ಕೊಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದ್ದರೂ ಕಾರ್ಯಕರ್ತರ ಉತ್ಸಾಹ ಕಡಿಮೆಯಾಗಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಬಹುಮತ ದೊರೆಯದಿದ್ದರೂ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದರು.

ಪಕ್ಷ ಸಂಘಟನೆಗಾಗಿ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ. ಗ್ರಾಪಂ ಚುನಾವಣೆಗಳು ಪಕ್ಷದ ಚಿಹ್ನೆ ಮೇಲೆ ನಡೆಯುವುದಿಲ್ಲ. ಆಯಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗುರುತಿಸಿ ಪಕ್ಷದಲ್ಲಿ ಪ್ರತಿಯೊಬ್ಬರಿಗೂ ಆದ್ಯತೆ ನೀಡಲಾಗುವುದು. ಯಾರೂ ಕೂಡ ಧೃತಿಗೆಡಬೇಕಿಲ್ಲ ಎಂದು ಹೇಳಿದರು.

ABOUT THE AUTHOR

...view details