ಬೆಂಗಳೂರು:ಲೈಟಿಂಗ್ಸ್ ಇಲ್ಲ, ಡಿಜೆ ಸೌಂಡ್ ಇಲ್ಲ, ಐದಕ್ಕಿಂತ ಹೆಚ್ಚು ಜನ ಗುಂಪು ಸೇರಂಗಿಲ್ಲ, 10 ಗಂಟೆಯ ಬಳಿಕ ಪಬ್,ಬಾರ್ಗಳಲ್ಲಿ ಕೂತು ಕುಡಿಯಂಗಿಲ್ಲ, ಕುಣಿದು ಕುಪ್ಪಳಿಸುವಂತಿಲ್ಲ, ರಸ್ತೆಯಲ್ಲಿ ಅನಗತ್ಯವಾಗಿ ಓಡಾಡಿದ್ರೆ ಪೊಲೀಸರ ಲಾಠಿ ಸದ್ದು ಮಾಡುತ್ತೆ. ಇವತ್ತಿನ ನೈಟ್ ಕರ್ಫ್ಯೂ ಕಳೆದ ಮೂರು ದಿನದಂತಿರಲ್ಲ. ಪೊಲೀಸರು ಕೊಟ್ಟಿರುವ ಖಡಕ್ ವಾರ್ನಿಂಗ್ ಇದು.
ಒಂದೆಡೆ ಕೊರೊನಾ ಕೇಕೆ ಹಾಕುತ್ತಿದೆ. ಮತ್ತೊಂದೆಡೆ ಡೆಡ್ಲಿ ಒಮಿಕ್ರಾನ್ ಅಬ್ಬರಿಸುತ್ತಿದೆ. ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೊಸ ವರ್ಷಕ್ಕೆ ಜನ ಸೇರಿದರೆ ಸೋಂಕು ಪ್ರಕರಣಗಳು ಹೆಚ್ಚಾಗಲಿವೆ ಎಂಬ ವಿಚಾರವನ್ನು ಗಮನದಲ್ಲಿಟ್ಟುಕೊಂಡ ಸರ್ಕಾರ ಸರಿಯಾಗಿ ಹೊಸ ವರ್ಷಾಚರಣೆ ಹೊತ್ತಲ್ಲೇ ನೈಟ್ ಕರ್ಫ್ಯೂ ಜಾರಿ ಮಾಡಿದೆ.
ನೈಟ್ ಕರ್ಫ್ಯೂದಿಂದಾಗಿ ಮೋಜು-ಮಸ್ತಿ, ಡಿಜೆ, ಡ್ಯಾನ್ಸ್ ಕುಣಿತಕ್ಕೆ ಬ್ರೇಕ್ ಬಿದ್ದಿದೆ. ರಾತ್ರಿ 10 ಗಂಟೆಯಿಂದ ಮರು ದಿನ ಬೆಳಗ್ಗೆ 5 ಗಂಟೆವರೆಗೆ ರಾಜ್ಯಾದ್ಯಂತ ಈ ನಿರ್ಬಂಧಗಳು ಜಾರಿಯಲ್ಲಿರಲಿವೆ. ಈ ವೇಳೆ ಅನಗತ್ಯವಾಗಿ ರಸ್ತೆಯಲ್ಲಿ ಕಾಲಿಟ್ಟರೆ ಖಾಕಿ ಲಾಕ್ ಮಾಡಿ ಕೇಸ್ ಹಾಕಲಿದೆ.
ನಗರ ಪೊಲೀಸ್ ಆಯುಕ್ತ ಕಮಲ್ ಜನವರಿ 31ಕ್ಕೆ ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಕೊಟ್ಟಿರುವ ಸೂಚನೆಗಳಿವು...
- ರಾತ್ರಿ 10 ಗಂಟೆಯಿಂದ ಜನವರಿ 2022 ರ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ
- ಸಾರ್ವಜನಿಕ ಸ್ಥಳಗಳಲ್ಲಿ ಜನ ಗುಂಪುಗೂಡುವುದು ನಿಷೇಧ
- ರಸ್ತೆ, ಸಾರ್ವಜನಿಕ ಸ್ಥಳದಲ್ಲಿ ಐದಕ್ಕಿಂತ ಹೆಚ್ಚು ಜನ ಗುಂಪು ಸೇರಿದರೆ ಕಾನೂನು ಕ್ರಮ
- ಪಾರ್ಕ್, ಕ್ರೀಡಾಂಗಣ, ಅಪಾರ್ಟ್ಮೆಂಟ್ಗಳಲ್ಲಿ ಜನ ಸೇರಿ ಸಂಭ್ರಮಾಚರಣೆ ನಿಷೇಧ
- ಹೋಟೆಲ್, ಮಾಲ್, ರೆಸ್ಟೋರೆಂಟ್, ಕ್ಲಬ್, ಪಬ್, ಕ್ಲಬ್ ಹೌಸ್, ಡಿಜೆ ನಿಷೇಧ
- ಮ್ಯೂಸಿಕ್ ಬ್ಯಾಂಡ್, ಡ್ಯಾನ್ಸ್ ಕೂಡ ಆಯೋಜಿಸುವಂತಿಲ್ಲ
- ತಮ್ಮ ತಮ್ಮ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲಿಸಿ ಸಂಭ್ರಮಾಚರಣೆ ಮಾಡಬಹುದು
- ಹೆಚ್ಚಿನ ಸೌಂಡ್ ಇಟ್ಟು ಮ್ಯೂಸಿಕ್ ಹಾಕುವಂತಿಲ್ಲ
- ಹೋಟೆಲ್, ಮಾಲ್, ಪಬ್, ರೆಸ್ಟೋರೆಂಟ್ಗಳಲ್ಲಿ ಕೋವಿಡ್ ನಿಯಮ ಪಾಲನೆ ಕಡ್ಡಾಯ
- ಉಲ್ಲಂಘನೆ ಮಾಡಿದರೆ ಎನ್ಡಿಎಂಎ ಅಡಿ ಕೇಸ್ ದಾಖಲಿಸಿ ಕ್ರಮ