ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಆಫ್ರಿಕನ್ ಡ್ರಗ್ ಪೆಡ್ಲರ್ಗಳ ಹಾವಳಿ ಮುಂದುವರೆದಿದೆ. ನೈಜೀರಿಯನ್ ಮೂಲದ ಇಬ್ಬರು ಮಾದಕ ಸರಬರಾಜುಗಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಿಚಲ್ ಜಾನ್ಸನ್ ಹಾಗೂ ಚಿನೇದು ಲಾರೆನ್ಸ್ ಎಂದು ಗುರುತಿಸಲಾಗಿದೆ.
ಮಾದಕ ವಸ್ತು ಸರಬರಾಜು: ಇಬ್ಬರು ನೈಜೀರಿಯನ್ ಪ್ರಜೆಗಳ ಬಂಧನ - ಸಿಸಿಬಿಯಿಂದ ನೈಜೀರಿಯನ್ ಮಾದಕ ಸರಬರಾಜುಗಾರರ ಬಂಧನ
ನೈಜೀರಿಯನ್ ಮೂಲದ ಇಬ್ಬರು ಮಾದಕ ಸರಬರಾಜುಗಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿಸಿಬಿಯಿಂದ ನೈಜೀರಿಯನ್ ಮಾದಕ ಸರಬರಾಜುಗಾರರ ಬಂಧನ
ಮುಂಬೈನಿಂದ ಕಡಿಮೆ ಬೆಲೆಗೆ ಎಂಡಿಎಂಎ ಕ್ರಿಸ್ಟೆಲ್ ತರುತ್ತಿದ್ದ ಆರೋಪಿಗಳು, ಬೆಂಗಳೂರಿನಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು. ಬ್ಯುಸಿನೆಸ್ ವೀಸಾ ಅಡಿಯಲ್ಲಿ ಭಾರತಕ್ಕೆ ಬಂದಿದ್ದ ಇವರು ಈ ಹಿಂದೆಯೂ ಇಂದಿರಾ ನಗರ ಹಾಗೂ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ಮಾದಕ ಸರಬರಾಜು ಆರೋಪದಲ್ಲಿ ಬಂಧಿಸಲ್ಪಟ್ಟಿದ್ದರು. ಬಂಧಿತರಿಂದ 20 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್ ಹಾಗೂ ಎರಡು ಮೊಬೈಲ್ ತೂಕದ ಯಂತ್ರ ವಶಕ್ಕೆ ಪಡೆಯಲಾಗಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಡ್ರಗ್ಸ್ ಪೆಡ್ಲರ್ ಬಂಧನ: 5 ಕೆಜಿ ಗಾಂಜಾ ವಶ