ಕರ್ನಾಟಕ

karnataka

ETV Bharat / state

ಕಾರ್ಬನ್ ಪೇಪರ್‌ನಲ್ಲಿ ಡ್ರಗ್ ಸಾಗಾಟ : ನೈಜೀರಿಯನ್ ಪ್ರಜೆ ಅರೆಸ್ಟ್​​

ಡ್ರಗ್ ಡೀಲ್‌ಗೆ ದಕ್ಷಿಣ ಭಾರತದ ಸಲೆಮ್​, ತಿರುಪೂರು, ಎರೋಡ್ ಪ್ರದೇಶಗಳನ್ನ ಟಾರ್ಗೆಟ್‌ ಮಾಡಲಾಗಿತ್ತು ಎಂಬ ವಿಚಾರ ವಿಚಾರಣೆ ವೇಳೆ‌ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಪ್ರಕರಣದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ..

Bangalore
ಎಗ್ವಿನ್ ಕಿಂಗ್ ಸ್ಲೇ ಬಂಧಿತ ಆರೋಪಿ

By

Published : Jul 19, 2021, 9:51 PM IST

ಬೆಂಗಳೂರು :ಕಾರ್ಬನ್ ಪೇಪರ್​​ನಲ್ಲಿ ಡ್ರಗ್ ಪ್ಯಾಕೇಟ್ ಸುತ್ತಿ ಲಗೇಜ್ ಬ್ಯಾಗ್​​ನಲ್ಲಿ ಡ್ರಗ್ ಸಾಗಾಟ ಮಾಡುತ್ತಿದ್ದ ನೈಜೀರಿಯನ್ ಪ್ರಜೆಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಕಾರ್ಬನ್ ಪೇಪರ್‌ನಲ್ಲಿ ಡ್ರಗ್ ಸಾಗಾಟ

ಎಗ್ವಿನ್ ಕಿಂಗ್ ಸ್ಲೇ ಎಂಬಾತ ಬಂಧಿತ ಆರೋಪಿ. ಈತ ದೆಹಲಿಯಿಂದ ರೈಲಿನಲ್ಲಿ ತಮಿಳುನಾಡಿಗೆ ಹೊರಟಿದ್ದ. ಈ ವೇಳೆ ತಪಾಸಣೆ ನಡೆಸಿದಾಗ ಲಗೇಜ್ ಬ್ಯಾಗ್​​ನಲ್ಲಿ ಕಾರ್ಬನ್ ಪೇಪರ್​​ನಿಂದ ಕವರ್ ಮಾಡಿದ 8 ಡ್ರಗ್​​ ಪ್ಯಾಕೇಟ್ ಪತ್ತೆಯಾಗಿವೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಡ್ರಗ್ ಸಮೇತ ಆರೋಪಿಯನ್ನು ಎನ್‌ಸಿಬಿ ಪೊಲೀಸರು ಬಂಧಿಸಿದ್ದಾರೆ.

ಡ್ರಗ್ ಡೀಲ್‌ಗೆ ದಕ್ಷಿಣ ಭಾರತದ ಸಲೆಮ್​, ತಿರುಪೂರು, ಎರೋಡ್ ಪ್ರದೇಶಗಳನ್ನ ಟಾರ್ಗೆಟ್‌ ಮಾಡಲಾಗಿತ್ತು ಎಂಬ ವಿಚಾರ ವಿಚಾರಣೆ ವೇಳೆ‌ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಪ್ರಕರಣದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details