ಬೆಂಗಳೂರು:ಡ್ರಗ್ಸ್ ಪೆಡ್ಲಿಂಗ್ ಆರೋಪದ ಮೇಲೆ ಕನ್ನಡ ಸೇರಿ ವಿವಿಧ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದ ನೈಜೀರಿಯನ್ ಪ್ರಜೆ ಚಕ್ವಿಮ್ ಮಾಲ್ವಿನ್ ನನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 8 ಲಕ್ಷ ಮೌಲ್ಯದ ಹ್ಯಾಶಿಷ್ ಆಯಿಲ್ ಹಾಗೂ ಎಂಡಿಎಂಎ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಂಗಂ-2 ಸಿನಿಮಾದ ಸಹನಟ ಡ್ರಗ್ ಕೇಸ್ನಲ್ಲಿ ಅರೆಸ್ಟ್ ಫ್ಯಾಷನ್ಗಾಗಿ ನಟನೆ: ಹಣ ಸಂಪಾದನೆಗಾಗಿ ಡ್ರಗ್ಸ್ ದಂಧೆ:
ಬಂಧಿತ ನೈಜೀರಿಯನ್ ಪ್ರಜೆ ಚಕ್ವಿಮ್ ಮಾಲ್ವಿನ್ ಕನ್ನಡ, ಹಿಂದಿ, ತಮಿಳು ಸೇರಿ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾನೆ.ಸ್ಯಾಂಡಲ್ವುಡ್ನ ಅಣ್ಣಾಬಾಂಡ್, ಪರಮಾತ್ಮ, ತಮಿಳಿನ ಸಿಂಗಂ, ವಿಶ್ವರೂಪಂ ಸೇರಿ 20 ಚಿತ್ರಗಳಲ್ಲಿ ಈತ ಸಹನಟನಾಗಿದ್ದ. ಅಲ್ಲದೇ ನೈಜೀರಿಯಾದ (NOLLYWOOD) ಮೂರು ಚಿತ್ರಗಳಲ್ಲೂ ಅಭಿನಯಿಸಿದ್ದಾನೆ.
ಮುಂಬೈನ ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ನಟನಾ ತರಬೇತಿ:
ಮೆಡಿಕಲ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಈತ ಮುಂಬೈನ ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ನಟನಾ ತರಬೇತಿ ಪಡೆದಿದ್ದ. 2006ರಲ್ಲಿ ನೈಜೀರಿಯಾ ರಾಜಧಾನಿ ಅಬುಜಾದಲ್ಲಿರುವ ನ್ಯೂಯಾರ್ಕ್ ಫಿಲ್ಮಂ ಅಕಾಡೆಮಿಯಲ್ಲಿ ಆರು ತಿಂಗಳ ಕಾಲ ನಟನೆಯ ತರಬೇತಿ ಪಡೆದಿದ್ದ.
ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ:
ನಟನೆಯ ಗೀಳು ಹತ್ತಿಸಿಕೊಂಡಿದ್ದ ಈತನಿಗೆ ಲಾಕ್ಡೌನ್ ಹಿನ್ನೆಲೆ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಕಡಿಮೆಯಾದಾಗ, ಆಫ್ರಿಕಾ ಪ್ರಜೆಗಳಿಂದ ಅಕ್ರಮವಾಗಿ ಡ್ರಗ್ಸ್ ತರಿಸಿಕೊಂಡು ಉದ್ಯಮಿ, ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಇದೇ ರೀತಿ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುವಾಗ ರೆಡ್ ಹ್ಯಾಂಡಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಪ್ರಕರಣ ಕುರಿತು ಡಿಸಿಪಿ ಮಾಹಿತಿ ಈತ ಎಷ್ಟು ವರ್ಷಗಳಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದ ? ಯಾರ ಜೊತೆ ಸಂಪರ್ಕದಲ್ಲಿದ್ದ.. ನಟ-ನಟಿಯರ ಸಂಪರ್ಕವಿತ್ತಾ? ಎಂಬುದರ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಒಳಪಡಿಸಿದ್ದಾರೆ.
ಇದನ್ನೂ ಓದಿ:ಬಹು ನಿರೀಕ್ಷಿತ ಪುಷ್ಪ ಚಿತ್ರದ ನಟಿ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್ ರಿವೀಲ್