ಬೆಂಗಳೂರು: ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ ನೈಜಿರಿಯಾ ಪ್ರಜೆಯನ್ನ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೋನ್ಸೋ ಜೋಶೀಮ್-ಜಾನ್ ಬಂಧಿತ ಆರೋಪಿ. ನಗರದ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ನೈಜಿರಿಯಾ ಮೂಲದ ವ್ಯಕ್ತಿ ಬಾಡಿಗೆ ಮನೆ ಪಡೆದುಕೊಂಡು ಮನೆಯಲ್ಲಿಯೇ ಮಾದಕ ವಸ್ತುಗಳಾದ ಕೊಕೇನ್ ಮತ್ತು ಎಲ್ಎಸ್ಡಿಗಳನ್ನು ಮಾರಟ ಮಾಡುತ್ತಿದ್ದ. ಈ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಲಭ್ಯವಾಗಿದ್ದು, ದಾಳಿ ನಡೆಸಿ ಆರೋಪಿ ಬಳಿ ಇದ್ದ 28 ಗ್ರಾಂ ತೂಕದ ಕೊಕೇನ್ ಹಾಗೂ 10 ಎಲ್ಎಸ್ಡಿ, ಒಂದು ಟೊಯೋಟೊ ಕಾರು ಮತ್ತು ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.