ಕರ್ನಾಟಕ

karnataka

ETV Bharat / state

ನೈಸ್ ಕಾಂಗ್ರೆಸ್ - ಜನತಾದಳದ ಪಾಪದ ಕೂಸು:  ಆರ್. ಅಶೋಕ್ - Strict action will be taken to solve this issue: R. Ashok

ಜನತಾದಳ ಯೋಜನೆಯನ್ನು ನೀಡಿದೆ. ಕಾಂಗ್ರೆಸ್ ಎಲ್ಲ ರೀತಿಯ ಅಪ್ರೂವಲ್ ಮಾಡಿದೆ. ಇದೆಲ್ಲಾ ಈಗ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಕಾಂಗ್ರೆಸ್- ಜನತಾದಳದ ಪಾಪದ ಕೂಸು ಈ ನೈಸ್​​ ಆಗಿದೆ. ಈಗ ಇವೆಲ್ಲವುಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಈ ಸಮಸ್ಯೆ ಬಗೆಹರಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.‌ಅಶೋಕ್ ತಿಳಿಸಿದ್ದಾರೆ.

R. Ashok
ಕಂದಾಯ ಸಚಿವ ಆರ್.‌ಅಶೋಕ್

By

Published : Apr 25, 2022, 8:38 PM IST

ಬೆಂಗಳೂರು: ನೈಸ್ ಕಾಂಗ್ರೆಸ್- ಜನತಾದಳದ ಪಾಪದ ಕೂಸು. ಈಗ ಸಾಕಷ್ಟು ಸಮಸ್ಯೆ ಸೃಷ್ಟಿ ಮಾಡಿದೆ. ನೈಸ್ ರೋಡ್​ ಸಮಸ್ಯೆ ಶೀಘ್ರ ಬಗೆಹರಿಸಲಾಗುವುದು ಎಂದು ಕಂದಾಯ ಸಚಿವ ಆರ್.‌ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ನೈಸ್ ರಸ್ತೆಗೆ ಸಂಬಂಧಿಸಿದಂತೆ ಸಂಪುಟ ಉಪ ಸಮಿತಿ ಸಭೆಯ ನಡೆಯಿತು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನತಾದಳ ಯೋಜನೆಯನ್ನು ನೀಡಿದೆ. ಕಾಂಗ್ರೆಸ್ ಎಲ್ಲ ರೀತಿಯ ಅಪ್ರೂವಲ್ ನೀಡಿದೆ. ಇದೆಲ್ಲಾ ಈಗ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ನೈಸ್​ನವರು ಹೇಳಿದಂತೆ ಕಾಂಕ್ರೀಟ್ ರೋಡ್ ಮಾಡಿಲ್ಲ. ಕ್ರಾಸ್ ರಸ್ತೆಯಲ್ಲಿ ನಿರ್ಮಾಣ ಮಾಡಿದ ಬ್ರಿಡ್ಜ್​ನಲ್ಲಿಯೂ ಉಲ್ಲಂಘನೆ ಮಾಡಿದ್ದಾರೆ. ಕೆಲವೆಡೆ 20, 30, 60ಅಡಿ‌ ಈ ರೀತಿ ಉಲ್ಲಂಘನೆ ಆಗಿದೆ.

ಕಂದಾಯ ಸಚಿವ ಆರ್.‌ಅಶೋಕ್

ಹೆಚ್ಚಿನ ಭೂಮಿ ಸಹ ಪಡೆದಿದ್ದಾರೆ. ಇವೆಲ್ಲಕ್ಕೂ ಕಾರಣ ಕಾಂಗ್ರೆಸ್ ಕಾಲದಲ್ಲಿ‌ ಮಾಡಿಕೊಂಡ ಒಪ್ಪಂದಗಳು. ಕಾಂಗ್ರೆಸ್ ಮಾಡಿಕೊಂಡ ಒಪ್ಪಂದದ ಕಾರಣಕ್ಕೆ ಸರ್ಕಾರ 100 ಕೋಟಿ ರೂ. ಹಣ ನೀಡಬೇಕೆಂದು ನೈಸ್ ಹೇಳುತ್ತದೆ. ಈಗ ಇವೆಲ್ಲವುಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.

ನೈಸ್​ಗೆ ನೀಡಿರುವ ಹೆಚ್ಚುವರಿ ಭೂಮಿ ವಾಪಸ್​ ಪಡೆಯುವ ಬಗ್ಗೆ ಸಭೆ:ನೈಸ್ ಸಂಸ್ಥೆಗೆ ಹೆಚ್ಚುವರಿ ಭೂಮಿಯನ್ನು ಈ ಹಿಂದೆ ಕೊಡಲಾಗಿತ್ತು. ಹೆಚ್ಚುವರಿಯಾಗಿ ನೀಡಿರುವ ಭೂಮಿಯನ್ನು ಹಿಂದಕ್ಕೆ ಪಡೆಯಲು ಸಂಪುಟ ಉಪಸಮಿತಿ ಸಭೆ ಒಪ್ಪಿಗೆ ನೀಡಿದ್ದು, ಅದನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲು ಚರ್ಚೆಯಾಗಿದೆ. ಅಕ್ಟೋಬರ್-ನವೆಂಬರ್ ಒಳಗಡೆ ಎಲ್ಲ ಸಮಸ್ಯೆ ಪರಿಹರಿಸಬೇಕು. ಹೆಚ್ಚಿನ ಭೂಮಿಯನ್ನು ವಾಪಸ್ ಪಡೆಯಬೇಕು. ಮೆಟ್ರೋ ಕಾಮಗಾರಿಗೆ ನೈಸ್ ನಿಂದ ಆಗುತ್ತಿರುವ ಸಮಸ್ಯೆ ಬಗೆಹರಿಸಬೇಕು. ಬೆಂಗಳೂರಿಗರಿಗೆ ಆಗುತ್ತಿರುವ ತೊಂದರೆ ಸರಿಪಡಿಸಬೇಕು. ಟೋಲ್ ಸಂಗ್ರಹದ ಕುರಿತು ನಿಯಂತ್ರಣ ‌ಸರ್ಕಾರಕ್ಕೆ ಸಿಗಬೇಕು. ಇವೆಲ್ಲ ವಿಷಯಗಳ ಕುರಿತು ವಿಸ್ತೃತವಾದ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ಕೋವಿಡ್ 4ನೇ ಅಲೆ ಭೀತಿ: ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ.. ಸರ್ಕಾರದಿಂದ ಹೊಸ ಮಾರ್ಗಸೂಚಿ

ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ವಿಚಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶೋಕ್, ಕಾನೂನಿನ ಪ್ರಕಾರ ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯವನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ. ಬಗೆದಷ್ಟು ತಿಮಿಂಗಿಲಗಳು ಹೊರ ಬರುತ್ತಿವೆ. ಇದರಲ್ಲಿ ಇನ್ನೂ ಆಳಕ್ಕೆ‌ಹೋಗಿ ತನಿಖೆ ಆಗಬೇಕು ಎಂದರು.

ABOUT THE AUTHOR

...view details