ಬೆಂಗಳೂರು :ಆಂತರಿಕ ಭದ್ರತಾ ವಿಭಾಗ (ಐ.ಎಸ್.ಡಿ) ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ಅಲ್ ಖೈದಾ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ. ಬೆಳಗಿನ ಜಾವ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ನಗರದ ಥಣಿಸಂದ್ರದ ಮಂಜುನಾಥ ನಗರದಲ್ಲಿ ವಾಸವಿದ್ದ ಆರೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಲ್ ಕೈದಾ ಸೇರಿ ವಿವಿಧ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ನಂಟು ಬೆಳೆಸಿಕೊಂಡಿದ್ದ ಶಂಕೆ ಮೇರೆಗೆ ಥಣಿಸಂದ್ರದ ಮಂಜುನಾಥ್ ನಗರದಲ್ಲಿ ವಾಸಿಸುತ್ತಿದ್ದ ಶಂಕಿತ ಉಗ್ರ ಆರೀಫ್ನನ್ನು ಬಂಧಿಸಿರುವ ರಾಜ್ಯ ಆಂತರಿಕಾ ಭದ್ರತಾ ಪಡೆ ತನಿಖೆಯನ್ನು ಚುರುಕುಗೊಳಿಸಿದೆ.
ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಆರೀಫ್, ಅಲ್ ಖೈದಾಗೆ ಸಂಬಂಧಿಸಿದ ಟೆಲಿಗ್ರಾಂ ಮತ್ತಿತರ ಗ್ರೂಪ್ಗಳಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ.
ವಾಸವಾಗಿದ್ದ ಮನೆಯನ್ನು ಶೋಧ ನಡೆಸಿರುವ ಅಧಿಕಾರಿಗಳು ಆರೀಫ್ ಮೊಬೈಲ್, ಲ್ಯಾಪ್ ಟಾಪ್, ಪೆನ್ ಡ್ರೈವ್ ಸೇರಿ ಇತರೆ ತಾಂತ್ರಿಕ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಂಕಿತನ ಬ್ಯಾಂಕ್ ಅಕೌಂಟ್ ಫ್ರೀಜ್ ಮಾಡುವ ಸಾಧ್ಯತೆಯಿದೆ. ಹೊರದೇಶದಿಂದ ಹಣ ವರ್ಗಾವಣೆ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶ ಮೂಲದ ಆರೀಫ್ ಅಲಿಯಾಸ್ ಮಹಮದ್ ಆರಿಫ್ ಸಿರಿಯಾಕ್ಕೆ ಇರಾನ್ ಮೂಲಕ ತೆರಳಲು ಈ ಹಿಂದೆ ಯತ್ನಿಸಿದ್ದ. ಎರಡೂ ದೇಶಗಳಿಂದ ಒಪ್ಪಿಗೆ ಇಲ್ಲದ ಕಾರಣ ಹೋಗಲು ಸಾಧ್ಯವಾಗಿರಲಿಲ್ಲ. ಈಗ ಮಾರ್ಚ್ನಲ್ಲಿ ಮತ್ತೆ ಇರಾನ್ ಮೂಲಕ ಸಿರಿಯಾ ಹಾಗು ಅಫ್ಘಾನ್ಗೆ ತರಳಲು ಪ್ಲಾನ್ ಮಾಡಿ ಫ್ಲೈಟ್ ಟಿಕೆಟ್ ಸಹ ಖರೀದಿ ಸಹ ಆಗಿತ್ತು.
ಈ ಹಿಂದೆ ಐಸಿಸ್ ಬಗ್ಗೆ ಒಲವನ್ನು ಹೊಂದಿದ್ದ ಆರೀಫ್ ನಂತ್ರದ ಹಂತದಲ್ಲಿ ಆಫ್ಘಾನಿಸ್ತಾನದದಲ್ಲಿ ಅಲ್ಖೈದಾ ತಾಲಿಬಾನ್ ಪ್ರವರ್ಧಮಾನಕ್ಕೆ ಬಂದಿತ್ತು. ತಾಲಿಬಾನ್ ಪವರ್ ಫುಲ್ ಆಗಿದ್ದ ಬಳಿಕ ಈತನ ಒಲವು ಅಲ್ಖೈದಾ ಮತ್ತು ತಾಲಿಬಾನ್ ಕಡೆಗೆ ಹೋಗಿತ್ತು. ಈ ಹಿಂದೆ ಟ್ವಿಟರ್ನಲ್ಲಿ ಉಗ್ರ ಸಂಘಟನೆ ಪರವಾಗಿ ಫೇಕ್ ಅಕೌಂಟ್ ನಿಂದ ಪೋಸ್ಟ್ ಮಾಡಿದ್ದ. ಆದರೆ ಟ್ವಿಟರ್ ಈತನ ಫೇಕ್ ಅಕೌಂಟ್ಗಳನ್ನು ಬ್ಲಾಕ್ ಮಾಡಿತ್ತು. ಬಳಿಕ ಈತ ಟ್ವಿಟರ್ನಲ್ಲಿ ಸಕ್ರಿಯ ಅಗಿರಲಿಲ್ಲಾ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಆರೀಫ್ ಬಗ್ಗೆ ನಮಗೇನು ಗೊತ್ತಿರಲಿಲ್ಲ. ಆತ ನಮಾಜ್ಗೆ ಹೋದ್ರೂ ಸಹ ಯಾರ ಜೊತೆನೂ ಮಾತಾಡ್ತಿರಲಿಲ್ಲ. ಒಮ್ಮೆ ಮಾತಾಡಿಸಿದೆ.. ಆತ ನಮಾಜ್ಗೆ ಬಂದಿದ್ದಾಗ ಮಾತನಾಡಲಿರಲಿಲ್ಲ. ಒಬ್ಬನೇ ಓಡಾಡೋನು, ಒಬ್ಬನೇ ಇರೋನು. ಯಾರ ಜೊತೆ ಸೇರ್ತಿರಲಿಲ್ಲ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯ ವ್ಯಕ್ತಿ ಮೊಹಮ್ಮದ್ ಜಾವೀದ್ ಹೇಳಿಕೆ ಮಾತನಾಡಿ, ನಮ್ಮ ಜೊತೆ ನಮಾಜ್ಗೆ ಬರ್ತಿದ್ದ. ಒಮ್ಮೆ ಬಂದರೆ, ಒಮ್ಮೆ ಬರ್ತಿರಲಿಲ್ಲ. ನಾನು ನಮಾಜ್ಗೆ ಕರೆದೊಯ್ತಿದ್ದೆ. ನಮ್ಮ ಜೊತೆ ಏನು ಹೇಳ್ತಿರಲಿಲಿಲ್ಲ.. ನಮಾಜ್ ಮಾಡಲು ಐಷಾ ಮಸೀದಿಗೆ ತುಂಬಾ ಬಾರಿ ಹೋಗಿದ್ದೇವೆ. ಆ ವ್ಯಕ್ತಿ ಈ ರೀತಿ ಅನ್ನೋದೇ ಗೊತ್ತಿಲ್ಲ. ನಮಾಜ್ಗೆ ಜೊತೆಯಲ್ಲಿ ಬಂದ್ರು ಸಹ ಸುಮ್ಮನೆ ಇರ್ತಿದ್ದ' ಎಂದು ಹೇಳಿಕೆ ನೀಡಿದ್ದಾರೆ.
ಆರಗ ಜ್ಞಾನೇಂದ್ರ ಮಾಹಿತಿ: ಶಂಕಿತ ಉಗ್ರ ಆರೀಫ್ ಮಹಮ್ಮದ್ ಬಂಧನದ ಬಗ್ಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ. 'ಕಳೆದ ರಾತ್ರಿ ಬೆಂಗಳೂರಿನ ಥಣಿಸಂದ್ರದ ವಿಭಾಗದಲ್ಲಿ ಖಚಿತ ಮಾಹಿತಿಯೊಂದಿಗೆ ದಾಳಿ ಮಾಡಿದ ಪೊಲೀಸರು, ಶಂಕಿತ ಉಗ್ರ ಆರೀಫ್ ಮಹಮ್ಮದ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನು ಬೇರೆ ಬೇರೆ ವಿದೇಶಿ ಮತಾಂಧ ಹಾಗೂ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ. ಸದ್ಯ ತನಿಖೆಯಿಂದ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ ಎಂದಿದ್ದಾರೆ.
ಓದಿ:500 ರೂಪಾಯಿಗೆ ಜಗಳ.. ಹಣಕ್ಕಾಗಿ ಬಿತ್ತು ವ್ಯಕ್ತಿಯ ಹೆಣ