ಕರ್ನಾಟಕ

karnataka

ETV Bharat / state

Human Trafficking.. 13 ಮಂದಿ ಬಾಂಗ್ಲಾದೇಶಿಯರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ NIA - human trafficking case,

ಆಧಾರ್ ಕಾರ್ಡ್ ಸೇರಿ ಅಕ್ರಮವಾಗಿ ವಿವಿಧ ದಾಖಲಾತಿ ಸೃಷ್ಟಿಸಿ ಬಾಂಗ್ಲಾದಿಂದ ಭಾರತಕ್ಕೆ ಮಾನವ ಕಳ್ಳಸಾಗಾಣೆ(Human Trafficking) ಮಾಡಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 13 ಮಂದಿ ವಿರುದ್ಧ ಎನ್​ಐಎ(NIA) ಚಾರ್ಜ್​ಶೀಟ್​ ಸಲ್ಲಿಸಿದೆ.

NIA
ಎನ್ಐಎ

By

Published : Sep 6, 2021, 7:41 PM IST

ಬೆಂಗಳೂರು: ಅಕ್ರಮವಾಗಿ ಭಾರತದೊಳಗೆ ನುಸುಳಿ ಮಾನ ಕಳ್ಳಸಾಗಣೆ (Human Trafficking)ಯಲ್ಲಿ ತೊಡಗಿದ್ದ 13 ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ನಗರ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.

ಆಧಾರ್ ಕಾರ್ಡ್ ಸೇರಿ ಅಕ್ರಮವಾಗಿ ವಿವಿಧ ದಾಖಲಾತಿ ಸೃಷ್ಟಿಸಿ ಬಾಂಗ್ಲಾದೇಶದಿಂದ ಭಾರತಕ್ಕೆ ಮಾನವ ಕಳ್ಳಸಾಗಣೆ ಮಾಡಿ ವಿವಿಧ ಅಪರಾಧ ಪ್ರಕರಣಗಳಲ್ಲಿ 13 ಮಂದಿ ಭಾಗಿಯಾಗಿದ್ದರು.

ಭಾರತದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯರನ್ನು ತಮ್ಮ ಸಹಚರರ ಮೂಲಕ ಕರೆಯಿಸಿಕೊಂಡಿದ್ದರು. ಆಧಾರ್, ಪಾನ್​ ಹಾಗೂ ರೇಷನ್ ಕಾರ್ಡ್ ಮಾಡಿಸಿಕೊಂಡು ಅಕ್ರಮವಾಗಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ನೆಲೆಯೂರಿದ್ದರು. ಹೀಗಾಗಿ, ಬಾಂಗ್ಲಾದೇಶದ ಆರೋಪಿಗಳಾದ ರಫೀಕ್, ಶೋಬಜ್, ರಿದಾಯ್ ಬಾಬು, ರಕೀಬುಲ್ ಸಾಗರ್, ದಾಲೀಮ್ ಸೇರಿದಂತೆ 13 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಕಳೆದ ಮೇ 27ರಂದು ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಕನಕನಗರದ ಬಾಡಿಗೆ ಮನೆಯೊಂದರಲ್ಲಿ ಬಾಂಗ್ಲಾ ಯುವತಿ ಮೇಲೆ‌‌ ಸಾಮೂಹಿಕ ಆತ್ಯಾಚಾರ ಪ್ರಕರಣ ಸಂಬಂಧ ನಗರ ಪೊಲೀಸರು 10ಕ್ಕಿಂತ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಬಯಲಾಗಿತ್ತು. ಯುವತಿಯರನ್ನ ಇಟ್ಟುಕೊಂಡು ಆರೋಪಿಗಳು ಮಾಂಸ ದಂಧೆ ನಡೆಸುತ್ತಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.

ಈ ವೇಳೆ ಆರೋಪಿಗಳ ವಶದಲ್ಲಿದ್ದ 7 ಬಾಂಗ್ಲಾ ಮೂಲದ ಯುವತಿಯರನ್ನು ಪೊಲೀಸರು ರಕ್ಷಿಸಿದ್ದರು. ಅಲ್ಲದೆ, ಕಾನೂನುಬಾಹಿರವಾಗಿ ಭಾರತಕ್ಕೆ ಅಕ್ರಮವಾಗಿ ನುಸುಳಿ ವಾಮಮಾರ್ಗದಲ್ಲಿ ಆಧಾರ್ ಕಾರ್ಡ್, ಪಾನ್​ ಕಾರ್ಡ್ ಮಾಡಿಸಿರುವುದು ಎನ್ಐಎ ತನಿಖೆ ವೇಳೆ ಗೊತ್ತಾಗಿತ್ತು. ಹೀಗಾಗಿ, ಕಳೆದ ಜೂನ್ ನಲ್ಲಿ ರಾಮಮೂರ್ತಿನಗರ ಪೊಲೀಸರಿಂದ ಮಾಹಿತಿ ಪಡೆದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರತ್ಯೇಕವಾಗಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು. ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಪ್ರಮುಖ‌ ಆರೋಪಿಗಳನ್ನು ಬಾಡಿ ವಾರೆಂಟ್ ಮೇರೆಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿತ್ತು.

ಓದಿ:ನವೆಂಬರ್ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ, ನಿಫಾ ವೈರಸ್ ಹರಡದಂತೆ ಕ್ರಮ : ಸಚಿವ ಡಾ. ಕೆ ಸುಧಾಕರ್

For All Latest Updates

ABOUT THE AUTHOR

...view details