ಬೆಂಗಳೂರು:ಪೊಲೀಸರಿಗೆ ರಾಷ್ಟ್ರೀಯ ತನಿಖಾ ದಳ ಹೊಸ ಟಾಸ್ಕ್ ನೀಡಿದ್ದು, ಬಂಧಿಸಲಾಗಿರುವ ಪಿಎಫ್ಐ ಮುಖಂಡರ ಬ್ಯಾಂಕ್ ಡಿಟೇಲ್ಸ್ ನೀಡುವಂತೆ ಸೂಚಿಸಲಾಗಿದೆ. ಇದಕ್ಕೆ ಕಾರಣವೂ ಇದೆ. ಪಿಎಫ್ಐನಿಂದ ಎಲೆಕ್ಷನ್‌ಗೆ ನಿಲ್ಲಲು ಕೆಲವರು ತಯಾರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಇವರ ಹಣದ ಮೂಲ ಏನೂ ಎಂಬ ಬಗ್ಗೆ ಎನ್ಐಎ ಮಾಹಿತಿ ಕಲೆಹಾಕುತ್ತಿದೆ.
ಮಾಹಿತಿ ಸಂಗ್ರಹಿಸಲು ಸೂಚನೆ:ಹೀಗಾಗಿ ಬೆಂಗಳೂರು ಪೊಲೀಸರಿಗೂ ಮಾಹಿತಿ ಕಲೆಹಾಕುವಂತೆ ಎನ್ಐಎ ಅಧಿಕಾರಿಗಳು ಸೂಚಿಸಿದ್ದಾರೆ. ಈ ಸೂಚನೆ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಡಿಸಿಪಿಗಳ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಿಎಫ್ಐ ಸದಸ್ಯರಲ್ಲಿ ಯಾರೆಲ್ಲಾ ಎಲೆಕ್ಷನ್‌ಗೆ ನಿಲ್ಲುವ ಪ್ಲಾನ್ ಮಾಡಿದ್ರು. ಅವರ ಬ್ಯಾಗ್ರೌಂಡ್ ಏನು, ಹಣಕಾಸಿನ ಸ್ಥಿತಿಗತಿ ಹೇಗಿತ್ತು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದಾರೆ. ಸದ್ಯ ನಗರ ಪೊಲೀಸರು ಸೂಚನೆ ಬೆನ್ನಲ್ಲೇ ನಗರದಾದ್ಯಂತ ಅಲರ್ಟ್ ಆಗಿದ್ದಾರೆ.
ಚುನಾವಣೆ ಗೆಲ್ಲುವ ಪ್ಲ್ಯಾನ್ ಮಾಡಿದ್ದ ಪಿಎಫ್ಐ:ಇನ್ನೂ ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಹಾಗೂ ದೇಶದಲ್ಲಿ ಲೋಕಸಭಾ ಚುನಾವಣೆ ಬರುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಅಧಿಪತ್ಯ ಸಾಧಿಸಬೇಕು ಎಂದು ಪಿಎಫ್‌ಐ ಪ್ಲ್ಯಾನ್ ಮಾಡಿಕೊಂಡಿತ್ತು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಪ್ರಚಾರಕ್ಕೆ ಸಿದ್ಧತೆ ನಡೆಸಲಾಗಿತ್ತು.