ಕರ್ನಾಟಕ

karnataka

ETV Bharat / state

ಎನ್​ಜಿಟಿ ಹೊಸ ನಿಯಮದಿಂದ ಬದಲಾಗಲಿದೆಯಾ ನಗರದ ತ್ಯಾಜ್ಯ ಸಮಸ್ಯೆ..? - undefined

ನಾಳೆ ಜಿಕೆವಿಕೆ ಕೃಷಿ ವಿದ್ಯಾನಿಲಯದ ಆವರಣದಲ್ಲಿ ಜನಪ್ರತಿನಿಧಿಗಳು, ಕಸದ ಗುತ್ತಿಗೆದಾರರು, ಆರೋಗ್ಯ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸದಸ್ಯರಿಗೆ, ಘನತ್ಯಾಜ್ಯ ನಿರ್ವಹಣೆ ನಿಯಮ-2016 ರನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವ ಕುರಿತು ಎನ್​ಜಿಟಿ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್ ಆದಿಯವರು ಸಭೆ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ಕಸದ ಸಮಸ್ಯೆ, ಕಸ ರವಾನೆ, ನಿರ್ವಹಣೆ, ವಿಲೇವಾರಿಗಳ ಕುರಿತು ಕಾನೂನಿನ ಅರಿವು ನೀಡುವುದರ ಜೊತೆಗೆ ಪ್ರತಿಯೊಬ್ಬರ ಕರ್ತವ್ಯವನ್ನು ಮನದಟ್ಟು ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆ ನಾಳೆಯ ಸಭೆ ಮಹತ್ವ ಪಡೆದಿದ್ದು, ನಂತರದ ದಿನಗಳಲ್ಲಾದರೂ ನಗರದ ತ್ಯಾಜ್ಯ ಸಮಸ್ಯೆ ಬದಲಾಗಲಿದೆಯಾ ಎಂದು ಕಾದುನೋಡಬೇಕಿದೆ.

ಎನ್​ಜಿಟಿ ಹೊಸ ನಿಯಮ

By

Published : May 14, 2019, 3:42 PM IST

ಬೆಂಗಳೂರು:ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಕರ್ನಾಟಕ ರಾಜ್ಯ ಸಮಿತಿ ರಚಿಸಿ, ನಿವೃತ್ತ ನ್ಯಾಧೀಶರಾದ ಸುಭಾಷ್ ಆದಿಯವರನ್ನು ಅಧ್ಯಕ್ಷರನ್ನಾಗಿ ಮಾಡಿ ಎರಡು ತಿಂಗಳು ಕಳೆದಿವೆ. ಈವರೆಗೆ ಚುನಾವಣೆ ಹಿಂದೆ ಬಿದ್ದು, ಬೇರೆಲ್ಲಾ ಕೆಲಸಗಳನ್ನು ಮೂಲೆಗುಂಪು ಮಾಡಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಂದೆಡೆ ಕೂರಿಸಿ ಘನತ್ಯಾಜ್ಯ ನಿರ್ವಹಣೆಯ ಪಾಠ ಮಾಡಲು ಮುಂದಾಗಿದ್ದಾರೆ.

ಈ ಹಿಂದೆ ತಮಿಳುನಾಡಲ್ಲಿದ್ದ ರೀಜನಲ್ ಮಾನಿಟರಿಂಗ್ ಕಮಿಟಿ ನಾಲ್ಕೈದು ರಾಜ್ಯಗಳನ್ನು ಪರಿಶೀಲಿಸುತ್ತಿತ್ತು. ಆದರೆ ಇದೀಗ ಪ್ರತೀ ರಾಜ್ಯಕ್ಕೊಬ್ಬರು ನಿವೃತ್ತ ನ್ಯಾಯಮೂರ್ತಿಯವರನ್ನು ನೇಮಿಸಿದ್ದು, ಕರ್ನಾಟಕಕ್ಕೆ ಸುಭಾಷ್ ಆದಿಯವರನ್ನು ನೇಮಿಸಲಾಗಿದ್ದು, ಅವರು ನಡೆಸುತ್ತಿರುವ ಮೊದಲ ಸಭೆ ಇದಾಗಿದೆ.

ಈ ಹಿಂದೆ ಅಧಿಕಾರ ವಹಿಸಿಕೊಂಡ ಒಂದು ತಿಂಗಳೊಳಗೆ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳೊಂದಿಗೆ ಮಿಟಗಾನಹಳ್ಳಿ, ಬಾಗಲೂರು, ಬೆಳ್ಳಳ್ಳಿ ಕ್ವಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ ಕ್ವಾರಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೋಗುತ್ತಿರೋದು ಕಂಡು ಅಸಮಾಧಾನಗೊಂಡಿದ್ದರು. ಅಲ್ಲದೆ ಪಾಲಿಕೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದು, ತ್ಯಾಜ್ಯ ವಿಂಗಡಣೆಗೆ ಹೆಚ್ಚಿನ ಒತ್ತು ನೀಡುವಂತೆ ಕಿವಿ ಹಿಂಡಿದ್ದರು.

ಹೀಗಾಗಿ ಕಸ ಸಮಸ್ಯೆ ನಿವಾರಣೆ ಕೇವಲ ಅಧಿಕಾರಿಗಳ ಜವಾಬ್ದಾರಿ ಎಂದುಕೊಂಡಿದ್ದ ಪಾಲಿಕೆ ಸದಸ್ಯರು, ಶಾಸಕರಿಗೂ ಹಾಗೂ ಬೇಜವಾಬ್ದಾರಿಯಿಂದ ಇರುತ್ತಿದ್ದ ಅಧಿಕಾರಿಗಳು, ಗುತ್ತಿಗೆದಾರರಿಗೂ ನಾಳೆ ಸಭೆ ಬಿಸಿ ಮುಟ್ಟಿಸುವ ಸಾಧ್ಯತೆ ಇದೆ.

For All Latest Updates

TAGGED:

ABOUT THE AUTHOR

...view details