ಬೆಂಗಳೂರು:ಬೆಂಗಳೂರಿನ ಕಸದ ಸಮಸ್ಯೆ ನವೆಂಬರ್ ವೇಳೆಗೆ ಸಂಪೂರ್ಣವಾಗಿ ಬಗೆಹರಿಯಬೇಕು. ಇದಕ್ಕೆ ಪಾಲಿಕೆ ಸದಸ್ಯರ ಬೆಂಬಲವೂ ಅತ್ಯಗತ್ಯ ಎಂದು ವಿಶೇಷ ಕೌನ್ಸಿಲ್ ಸಭೆಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್ ಬಿ ಅಡಿ ಅವರು ಪಾಲಿಕೆ ಸದಸ್ಯರ ಸಲಹೆ ಕೇಳಿದರು.
ನೂತನವಾಗಿ ಪಾಲಿಕೆ ಮಾಡುತ್ತಿರುವ ಹೊಸ ಹಸಿ ಕಸದ ಟೆಂಡರ್ ಬಗ್ಗೆ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಆಕ್ಷೇಪ ವ್ಯಕ್ತಪಡಿಸಿ, ಹೊಸ ಟೆಂಡರ್ ಪ್ರಕಾರ ಪ್ರತಿ ದಿನ ಹಸಿ ಕಸ ಕಲೆಕ್ಷನ್, ಎರಡು ದಿನ ಮಾತ್ರ ಒಣಕಸ ಕಲೆಕ್ಷನ್ ಈ ಯೋಜನೆ ಸಫಲವಾಗೋದಿಲ್ಲ ಎಂದರು.
ಇದಕ್ಕೆ ಸುಭಾಷ್ ಅಡಿಯವರು ಇಡೀ ರಾಜ್ಯದಲ್ಲಿ ಈ ನಿಯಮ ಒಪ್ಪದಿರುವವರು ನೀವು ಮಾತ್ರ ಎಂದ್ರು. ಇದಕ್ಕೆ ಪ್ರತ್ಯುತ್ತರ ನೀಡಿದ ಕಟ್ಟೆ ಸತ್ಯನಾರಾಯಣ, 23 ವರ್ಷದ ಅನುಭವದಿಂದ ಇದನ್ನು ಹೇಳುತ್ತಿದ್ದೇವೆ. ನಮ್ಮ ಮಾತನ್ನೂ ಕೇಳಬೇಕು ನೀವು. ಇಲ್ಲಿ ಬಂದು ಆರ್ಡರ್ ಮಾಡುವುದು ಸರಿಯಲ್ಲ ಎಂದರು. ಕಟ್ಟೆ ಮಾತಿಗೆ ತಿರುಗೇಟು ನೀಡಿದ ಸುಭಾಷ್ ಅಡಿ, ಇದು ಮಾತನಾಡುವ ರೀತಿ ಅಲ್ಲ. ನಾನು ನಿಮ್ಮಿಂದ ಸಲಹೆ ಪಡೆಯಲು ಹಾಗೂ ವಿನಂತಿ ಮಾಡಿಕೊಳ್ಳಲು ಬಂದಿದ್ದೇನೆ. ಪಾರದರ್ಶಕವಾಗಿ ಕಸ ವಿಲೇವಾರಿಯಾಗಬೇಕು. ಪಾಲಿಕೆ ವೆಚ್ಚ ಕಡಿಮೆಯಾಗ್ಬೇಕು ಅನ್ನೋದು ನನ್ನ ಕಾಳಜಿ ಎಂದರು.
ಕ್ವಾರಿಗೆ ಕಸ ಹಾಕುವುದು ಕಾನೂನು ಬಾಹಿರ