ಕರ್ನಾಟಕ

karnataka

ETV Bharat / state

ವರದಕ್ಷಿಣೆ ದಾಹ: ಮದುವೆಯಾದ ಆರೇ ತಿಂಗಳಲ್ಲಿ ನವವಿವಾಹಿತೆ ಆತ್ಮಹತ್ಯೆ - ಬ್ಯಾಡರಹಳ್ಳಿ ಪೊಲೀಸ್ ಠಾಣಾ

ಮದುವೆಯಾದ ಆರು ತಿಂಗಳಲ್ಲೇ ವಿನುತಾ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Newly married women committed suicide
ನವವಿವಾಹಿತೆ ಆತ್ಮಹತ್ಯೆ

By

Published : Feb 14, 2020, 7:39 PM IST

ಬೆಂಗಳೂರು: ಮದುವೆಯಾದ ಆರು ತಿಂಗಳಲ್ಲೇ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದೆ.

ವಿನುತಾ (25) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನವ ವಿವಾಹಿತೆ. ಈಕೆೆಗೆ ಕಳೆದ ಆರು ತಿಂಗಳ ಹಿಂದೆ ಕಿರಣ್ ಕುಮಾರ್ ಜೊತೆ ವಿವಾಹವಾಗಿದೆ. ಮದುವೆಯಾದ ದಿನದಿಂದ ಪತ್ನಿಗೆ ಪತಿ ಕಿರಣ್‌ ಮಾನಸಿಕ,ದೈಹಿಕ ಕಿರುಕುಳ ನೀಡುತ್ತಿದ್ದನಂತೆ.

ನವವಿವಾಹಿತೆ ಆತ್ಮಹತ್ಯೆ ಪ್ರಕರಣ

ಈ ಸಂಬಂಧ ಮೂರು ಬಾರಿ ವನಿತಾ ಸಹಾಯವಾಣಿಯಲ್ಲಿ ಕೌನ್ಸೆಲಿಂಗ್ ಮಾಡಿದ್ದರೂ, ಕಿರುಕುಳ ನೀಡುವುದನ್ನು‌ ಕಡಿಮೆ ಮಾಡಿರಲಿಲ್ಲ. ವರದಕ್ಷಿಣೆ ಹಣಕ್ಕಾಗಿ ಕಿರಣ್ ಕುಮಾರ್ ಪ್ರತಿದಿನ ಹೆಂಡ್ತಿಗೆ ಕಿರುಕುಳ ನೀಡುತ್ತಿದ್ದ ಎಂಬ ವಿಚಾರವನ್ನು ಆಕೆಯ ಸಂಬಂಧಿಕರು ತಿಳಿಸಿದ್ದಾರೆ. ಗಂಡ ಹಾಗು ಅತ್ತೆ ವಿನುತಾಳ ಮೇಲೆ ಹಲ್ಲೆ ನಡೆಸಿ ನೇಣು ಹಾಕಿದ್ದಾರೆ ಅನ್ನೋದು ಅವರ ಆರೋಪ.

ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿ ಕಿರಣ್‌ ವಿರುದ್ಧ ಕೊಲೆ, ವರದಕ್ಷಿಣೆ ಕಿರುಕುಳ ಕೇಸ್ ದಾಖಲಾಗಿದೆ.

ABOUT THE AUTHOR

...view details