ಕರ್ನಾಟಕ

karnataka

ETV Bharat / state

ಎಂಟು ತಿಂಗಳ ಹಿಂದೆ ವಿವಾಹವಾಗಿದ್ದ ನವವಿವಾಹಿತೆ ಅನುಮಾನಸ್ಪಾದ ಸಾವು - ಬೆಂಗಳೂರಿನಲ್ಲಿ ನವ ವಿವಾಹಿತೆ ಸಾವು,

ಎಂಟು ತಿಂಗಳ ಹಿಂದೆ ವಿವಾಹವಾಗಿದ್ದ ನವವಿವಾಹಿತೆ ಅನುಮಾನಸ್ಪಾದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Newly married woman died, Newly married woman died in Bangalore, Bangalore crime news, ನವ ವಿವಾಹಿತೆ ಸಾವು, ಬೆಂಗಳೂರಿನಲ್ಲಿ ನವ ವಿವಾಹಿತೆ ಸಾವು, ಬೆಂಗಳೂರು ಅಪರಾಧ ಸುದ್ದಿ,
ಎಂಟು ತಿಂಗಳ ಹಿಂದೆ ವಿವಾಹವಾಗಿದ್ದ ನವವಿವಾಹಿತೆ ಅನುಮಾನಸ್ಪಾದ ಸಾವು

By

Published : Mar 12, 2021, 1:27 PM IST

ಬೆಂಗಳೂರು: ಕೊರೊನಾ ಬಿಕ್ಕಟ್ಟು ವೇಳೆ ವ್ಯಾಪಾರ ನಷ್ಟ ಆದ ಹಿನ್ನೆಲೆ ಪತ್ನಿಗೆ ಹಣ ತರುವಂತೆ ಪತಿ ಕಿರುಕುಳ ನೀಡುತ್ತಿದ್ದು, ಪತ್ನಿ ಅನುಮಾನಸ್ಪಾದ ಸಾವನ್ನಪ್ಪಿರುವ ಘಟನೆ ನಗರದ ವಿದ್ಯಾರಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌‌.

ವನಜಾಕ್ಷಿ ಸಾವನ್ನಪ್ಪಿದ್ದ ಗೃಹಿಣಿ. ಮೃತ ಮಹಿಳೆ ಪೋಷಕರು ನೀಡಿದ ದೂರಿನ ಮೇರೆಗೆ ಗಂಡ ನಾಗರಾಜ್ ವಿರುದ್ದ ಪ್ರಕರಣ ದಾಖಲಾಗಿದೆ.

ರಾಮಚಂದ್ರಾಪುರ ನಿವಾಸಿಗಳಾಗಿದ್ದ ದಂಪತಿಗೆ ಕಳೆದ ಎಂಟು ತಿಂಗಳ ಹಿಂದೆ ವಿವಾಹವಾಗಿತ್ತು. ನಾಗರಾಜ್ ರಾಮಚಂದ್ರಪುರದಲ್ಲಿ ಬೇಕರಿ ನಡೆಸುತ್ತಿದ್ದರು. ಕೊರೊನಾ ಲಾಕ್ ಡೌನ್ ಹಿನ್ನೆಲೆ ವ್ಯಾಪಾರದಲ್ಲಿ ನಷ್ಟವಾಗಿದೆ.

ಮದುವೆಯಾದ ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು‌. ದಿನ ಕಳೆದಂತೆ ಹಣಕಾಸು ವಿಚಾರಕ್ಕಾಗಿ ವನಜಾಕ್ಷಿ ಮತ್ತು ನಾಗರಾಜ್​ ನಡುವೆ ವೈಮನಸ್ಸು ಉಂಟಾಗಿದೆ. ಹಣಕಾಸು ತೊಂದರೆಯಿಂದ ರೋಸಿ ಹೋಗಿದ್ದ ನಾಗರಾಜ್, ಪತ್ನಿಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ‌.

ಹಣದ ವಿಚಾರವಾಗಿಯೇ ಪತಿ - ಪತ್ನಿ ಮಧ್ಯೆ ಕಳೆದ 6 ತಿಂಗಳಿಂದ ಕಿತ್ತಾಟ ನಡೆಯುತ್ತಲೇ ಇತ್ತು‌‌. ಇದರಿಂದ ವನಜಾಕ್ಷಿ ನೊಂದಿದ್ದಳು. ಏಕಾಏಕೆ ಕಿಟಕಿಗೆ ವೇಲಿನಿಂದ ನೇಣುಬಿಗಿದ ಸ್ಥಿತಿಯಲ್ಲಿ ವನಜಾಕ್ಷಿ ಮೃತದೇಹ ಪತ್ತೆಯಾಗಿದೆ.

ಸುದ್ದಿ ತಿಳಿದಾಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವನಜಾಕ್ಷಿ ಮೃತ ದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು. ಮಗಳನ್ನು ಹತ್ಯೆ ಮಾಡಿ ನೇಣುಬಿಗಿದಿರುವ ರೀತಿ​ ಬಿಂಬಿಸಿದ್ದಾನೆ ಎಂದು ಅಳಿಯ ನಾಗರಾಜ್​ ವಿರುದ್ಧ ವನಜಾಕ್ಷಿ ಪೋಷಕರು ದೂರು ನೀಡಿದ್ದಾರೆ.

ಘಟನೆ ಬಳಿಕ ಪತಿ ನಾಗರಾಜ್ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾರಣಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details