ಕರ್ನಾಟಕ

karnataka

ETV Bharat / state

ಮದುವೆಯಾದ 3 ತಿಂಗಳಿಗೆ ವ್ಯಕ್ತಿ ಆತ್ಯಹತ್ಯೆ; ಹೆಂಡತಿ ಕಿರುಕುಳ ಕಾರಣವೆಂದ ಪೋಷಕರು - etv bharat kannada

ನವವಿವಾಹಿತ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿಯ ಕಿರುಕುಳವೇ ಕಾರಣ ಎಂದು ಮೃತನ ಪಾಲಕರು ಆರೋಪಿಸಿದ್ದಾರೆ.

newly-married-person-committed-suicide-in-bengaluru
ಬೆಂಗಳೂರು: ಮದುವೆಯಾದ ಮೂರು ತಿಂಗಳಲ್ಲೇ ಹೆಂಡತಿ ಟಾರ್ಚರ್​ಗೆ ವ್ಯಕ್ತಿ ಆತ್ಮಹತ್ಯೆ

By

Published : Dec 14, 2022, 8:15 PM IST

ಬೆಂಗಳೂರು:ನಗರದಲ್ಲಿ ನವವಿವಾಹಿತ ಆತ್ಮಹತ್ಯೆಗೆ ಶರಣಾಗಿದ್ದು, ಪತ್ನಿಯ ಕಿರುಕುಳವೇ ಕಾರಣ ಎಂದು ಮೃತನ ಪಾಲಕರು ಆರೋಪಿಸಿದ್ದಾರೆ.ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಚನ್ನಪಟ್ಟಣ ತಾಲೂಕಿನ ಕೊಡ್ಲೂರು ಮೂಲದ ಮಹೇಶ್ವರ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಯುವತಿಯನ್ನು ಪ್ರೀತಿಸಿದ್ದ ಮಹೇಶ್ವರ ಕಳೆದ ಆಗಸ್ಟ್ 21ರಂದು ವಿವಾಹವಾಗಿದ್ದರು. ಜ್ಞಾನಭಾರತಿ ಸಮೀಪದ ಎಂ.ಇ. ಲೇಔಟ್‌ನ ಉಲ್ಲಾಳದಲ್ಲಿರುವ ಬಾಡಿಗೆ ಮನೆಯಲ್ಲಿ ಪತ್ನಿ ಜೊತೆ ವಾಸಿಸುತ್ತಿದ್ದರು. ಕೆಲ ದಿನಗಳ ಹಿಂದೆ ಪತ್ನಿ ಹೊರಗೆ ಹೋದ ಸಮಯದಲ್ಲಿ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಪತ್ನಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಯಾಗಿ ಮನೆಗೆ ಬಂದ ಪತ್ನಿಯು ಐಷಾರಾಮಿ ಜೀವನಕ್ಕೆ ಆಸೆಪಟ್ಟು ಬೇರೆ ಮನೆ ಮಾಡುವಂತೆ ಪಟ್ಟು ಹಿಡಿದಿದ್ದಳು. ಹೀಗಾಗಿ ಪುತ್ರ ಬೆಂಗಳೂರಿಗೆ ಬಂದಿದ್ದ. ಇಷ್ಟಾದರೂ ಆಕೆಗೆ ತನ್ನ ಐಷಾರಾಮಿ ಹುಚ್ಚು ಹೋಗಿರಲಿಲ್ಲ. ಬಂಗಾರದ ಆಭರಣ, ಲಕ್ಷಾಂತರ ರೂ. ಹಣ ನೀಡುವಂತೆ ಪೀಡಿಸುತ್ತಿದ್ದಳು. ಹೀಗಾಗಿ ನಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪಾಲಕರು ದೂರು ನೀಡಿದ್ದಾರೆ.

ತನಿಖೆ ನಡೆಸುತ್ತಿರುವ ಪೊಲೀಸರು, ಪತ್ನಿ ಪೀಡಿಸುತ್ತಿದ್ದಳು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರೀತಿ ಹೆಸರಲ್ಲಿ ದೈಹಿಕ ಸಂಪರ್ಕ; ಮಗುವಿಗೆ ಜನ್ಮ ನೀಡಿದ ಬಾಲಕಿ

ABOUT THE AUTHOR

...view details