ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಸೋಮವಾರ ಬೆಳಗ್ಗೆ ಝೀಬ್ರಾ ಮರಿಯೊಂದು ಜನಿಸಿದೆ. ಹತ್ತು ವರ್ಷ ವಯಸ್ಸಿನ ಕಾವೇರಿ-ಭರತ್ ಜೋಡಿಗೆ ಈ ಮರಿ ಜನಿಸಿದೆ. ಈ ಮೂಲಕ ಝೀಬ್ರಾಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ತಾಯಿ ಮತ್ತು ಮರಿ ಗಾಬರಿಯಾಗದಂತೆ ಅವುಗಳ ಸುರಕ್ಷತೆಗಾಗಿ ವಿಶೇಷ ಕಾಳಜಿಯನ್ನು ವಹಿಸಲಾಗಿದೆ ಎಂದು ಉಪ ನಿರ್ದೇಶಕ ಕೆ.ಹರೀಶ್ ತಿಳಿಸಿದ್ದಾರೆ.
ತಾಯಿ ಮತ್ತು ಮರಿ ಎರಡು ಆರೋಗ್ಯಕರವಾಗಿವೆ. ಮರಿಯ ಲಿಂಗವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಇದಕ್ಕೆ ಇನ್ನೂ ಹದಿನೈದು ದಿನ ಕಾಯಬೇಕಿದೆ ಎಂದು ಪಶು ಸೇವೆಗಳ ಸಹಾಯಕ ನಿರ್ದೇಶಕ ಡಾ. ಕೆ.ಎಸ್. ಉಮಾಶಂಕರ್ ತಿಳಿಸಿದ್ದಾರೆ. ಎಳೆ ಮರಿ ಝೀಬ್ರಾ ಮತ್ತು ತಾಯಿ ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲಕರ ವೀಕ್ಷಣೆಯಲ್ಲಿದೆ.