ಕರ್ನಾಟಕ

karnataka

ETV Bharat / state

ಪಾರ್ಕ್​, ಮೈದಾನಗಳಲ್ಲಿ ಹೊಸ ವರ್ಷಾಚರಣೆಗೆ ಮುಂದಾದ್ರೆ ಹುಷಾರ್...‌ ಬಿಬಿಎಂಪಿ ಖಡಕ್​ ಎಚ್ಚರಿಕೆ

ಹೊಸ ವರ್ಷಾರಚರಣೆ ಹೆಸರಲ್ಲಿ ಸ್ವಚ್ಛಂದವಾಗಿರುವ ಪಾರ್ಕ್ ಮತ್ತು ಆಟದ ಮೈದಾನಗಳಲ್ಲಿ ಕುಡಿದು, ತಿಂದು ಪ್ಲಾಸ್ಟಿಕ್​ ಕವರ್​, ಬಾಟಲಿಗಳನ್ನು ಎಸೆದು ಹೋಗುವವರಿಗೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಈಗಾಗಲೇ ಎಚ್ಚರಿಕೆ ನೀಡಿದೆ. ಯಾರಾದರೂ ಈ ರೀತಿ ಮಾಡಿದರೆ ಅವರ ವಿರುದ್ಧ ದೂರು ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಖಡಕ್​ ಸೂಚನೆ ರವಾನಿಸಿದೆ.

New Year Celebration Banned in BBMP Park
ಬಿಬಿಎಂಪಿ ಪಾರ್ಕ್​ಗಳಲ್ಲಿ ಹೊಸ ವರ್ಷಾಚರಣೆ ನಿಷೇಧ

By

Published : Dec 31, 2019, 5:26 PM IST

ಬೆಂಗಳೂರು: ಹೊಸ ವರ್ಷಾಚರಣೆ ಅಂದ್ಮೇಲೆ ಮೋಜು ಮಸ್ತಿಗೇನು ಕಡಿಮೆ ಇರಲ್ಲ. ಕೆಲವರು ನಗರದ ಎಂ.ಜಿ ರಸ್ತೆ, ಬ್ರಿಗೇಡ್​ ರಸ್ತೆಗಳಲ್ಲಿ ನ್ಯೂ ಇಯರ್​ ಆಚರಿಸಿದ್ರೆ, ಇನ್ನೂ ಕೆಲವರು ಮನೆ ಸುತ್ತಮುತ್ತಲಿನ ಪಾರ್ಕ್​, ಪ್ಲೇ ಗ್ರೌಂಡ್​ಗಳಲ್ಲಿ ಸಂಭ್ರಮಾಚರಣೆ ಮಾಡ್ತಾರೆ. ಆದ್ರೆ, ಇಂದು ಮೋಜು ಮಸ್ತಿಗೆಂದು ಪಾರ್ಕ್​ ಮತ್ತು ಆಟದ ಮೈದಾನಗಳತ್ತ ತೆರಳುವವರಿಗೆ ಬಿಬಿಎಂಪಿ ಖಡಕ್​ ಎಚ್ಚರಿಕೆ ರವಾನಿಸಿದೆ.

ಪಾರ್ಕ್​, ಮೈದಾನಗಳಲ್ಲಿ ಹೊಸ ವರ್ಷಾಚರಣೆಗೆ ನಿಷೇಧ

ಹೊಸ ವರ್ಷಾಚರಣೆ ಹೆಸರಲ್ಲಿ ಸ್ವಚ್ಛಂದವಾಗಿರುವ ಪಾರ್ಕ್ ಮತ್ತು ಆಟದ ಮೈದಾನಗಳಲ್ಲಿ ಕುಡಿದು, ತಿಂದು ಪ್ಲಾಸ್ಟಿಕ್​ ಕವರ್​, ಬಾಟಲಿಗಳನ್ನು ಎಸೆದು ಹೋಗುವವರಿಗೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಈಗಾಗಲೇ ಎಚ್ಚರಿಕೆ ನೀಡಿದೆ. ಯಾರಾದರೂ ಈ ರೀತಿ ಮಾಡಿದರೆ ಅವರ ವಿರುದ್ಧ ದೂರು ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತರು ಇಂದು ಹೇಳಿದ್ದಾರೆ.

ಪಾರ್ಕ್​ಗಳಲ್ಲಿ ಪಾರ್ಟಿ ಮಾಡುವವರ ಮೇಲೆ ನಿಗಾ ಇಡಲು ಈಗಾಗಲೇ ಗಸ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಈ ಸಂಬಂಧ ಮಾಹಿತಿಗಾಗಿ ಪಾರ್ಕ್​ಗಳ ಮುಂದೆ ಬಿತ್ತಿ ಪತ್ರಗಳನ್ನು ಸಹ ಅಂಟಿಸಲಾಗಿದೆ. ಇಷ್ಟಾಗಿಯೂ ಕಣ್ತಪ್ಪಿಸಿ ಯಾರಾದರು ಸೆಲೆಬ್ರೇಶನ್​ಗೆ ಮುಂದಾದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಖಡಕ್​​ ಎಚ್ಚರಿಕೆ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details