ಕರ್ನಾಟಕ

karnataka

ETV Bharat / state

ಪರಿಷ್ಕರಣೆಗೆ ತೀವ್ರ ಪ್ರತಿರೋಧ.. ಮಕ್ಕಳಿಗೆ ಇನ್ನೂ ಸಿಗದ ಪಠ್ಯ.. ದೇವನೂರು ಬಳಿಕ ಡಾ. ಜಿ ರಾಮಕೃಷ್ಣ ತಮ್ಮ ಪಾಠ ಕೈಬಿಡಲು ಪತ್ರ.. - ದೇವನೂರು ಮಹಾದೇವ ಮತ್ತು ಜಿ ರಾಮಕೃಷ್ಣ

ಈಗಾಗಲೇ ರಾಜ್ಯಾದ್ಯಂತ ಮೇ 16ರಿಂದ ಶಾಲೆ ತರಗತಿ ಶುರುವಾಗಿದೆ. ಭವಿಷ್ಯದ ಕನಸು ಕಾಣುತ್ತಿರುವ ಮಕ್ಕಳ ಕೈಗೆ ಪಠ್ಯ ಪುಸ್ತಕ ಇನ್ನೂ ಸಿಕ್ಕಿಲ್ಲ. ಈ ನಡುವೆ ಒಬ್ಬರ ಹಿಂದೆ ಒಬ್ಬರಂತೆ ತಮ್ಮ ಪಾಠ-ಪದ್ಯವನ್ನು ಕೈ ಬಿಡುವಂತೆ ಲೇಖಕರು, ಸಾಹಿತಿಗಳು ಶಿಕ್ಷಣ ಇಲಾಖೆಗೆ ಪತ್ರವನ್ನು ಬರೆಯುತ್ತಿದ್ದಾರೆ..

new-trouble-for-karnataka-education department-
ಶಿಕ್ಷಣ ಇಲಾಖೆಗೆ ಮತ್ತೊಂದು ತಲೆನೋವು!

By

Published : May 25, 2022, 12:45 PM IST

ಬೆಂಗಳೂರು :ರಾಜಕೀಯ ಕೆಸರೆಚಾಟದಲ್ಲಿ ಸಿಲುಕಿರುವ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಕಥೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಪಠ್ಯ ಪರಿಷ್ಕರಣೆ ವಿವಾದದ ಕುರಿತು ಪರ-ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಶಿಕ್ಷಣ ಇಲಾಖೆಗೆ ಹೊಸ ತಲೆನೋವು ಶುರುವಾಗಿದೆ. ಸಾಹಿತಿಗಳಾದ ದೇವನೂರು ಮಹಾದೇವ ಮತ್ತು ಡಾ.ಜಿ ರಾಮಕೃಷ್ಣ ಪಠ್ಯದಿಂದ ತಮ್ಮ ಪಾಠ ಕೈಬಿಡುವಂತೆ ಪತ್ರ ಬರೆದಿದ್ದಾರೆ. ಹೀಗಾಗಿ, ರಚನೆಗಳನ್ನು ಶಿಕ್ಷಣ ಇಲಾಖೆ ಕೈಬಿಡುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಶಿಕ್ಷಣ ಇಲಾಖೆ ಪಠ್ಯ ಪರಿಷ್ಕರಣೆಯ ಮುದ್ರಣ ಕಾರ್ಯ ಈಗಾಗಲೇ ಶೇ.70ರಷ್ಟು ಮುಗಿಸಿದೆ. ಈ ನಡುವೆ ಪರಿಷ್ಕರಣೆ ಕುರಿತಾಗಿ ವಿವಾದ ಭುಗಿಲೆದ್ದಿದೆ. ದೇವನೂರ ಮಹಾದೇವ ಅವರು ತಮ್ಮ ಪಾಠ ಕೈ ಬಿಡುವಂತೆ ಪತ್ರ ಬರೆದಿದ್ದಾರೆ. ಪಠ್ಯ ಪರಿಷ್ಕರಣೆಯ ಕುರಿತಾದ ವಾದ-ವಿವಾದಗಳು ನಡೆಯುತ್ತಿದ್ದು, 10ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ನನ್ನದು ಒಂದು ಕಥನದ ಭಾಗ ಸೇರಿದೆ ಎನ್ನಲಾಗುತ್ತಿದೆ. ಈ ಹಿಂದೆ ಹಳೆ ಪಠ್ಯಕ್ಕೆ ನೀಡಿದ ಅನುಮತಿಯನ್ನು ಹಿಂದಕ್ಕೆ ಪಡೆಯುತ್ತಿದ್ದೇನೆ ಎಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಕೆಟ್ಟ ರಾಜಕೀಯಕ್ಕೆ ಶಿಕ್ಷಣ ಗುರಿ :ಇತ್ತ ಡಾ.ಜಿ.ರಾಮಕೃಷ್ಣ ಅವರು ಕೂಡ ತಮ್ಮ ಪಠ್ಯ ತಿರಸ್ಕರಿಸುವಂತೆ ಮನವಿ ಮಾಡಿದ್ದಾರೆ.‌ ನೂತನ ಪಠ್ಯ ಪರಿಷ್ಕರಣೆಯ 10ನೇ ತರಗತಿಯಲ್ಲಿ ಇವರು ಬರೆದ ಭಗತ್ ಸಿಂಗ್​ ಪಾಠ ಹಾಕಲಾಗಿತ್ತು. ಆರಂಭದಲ್ಲಿ ಇದನ್ನು ಪಾಠ ಕೈಬಿಟ್ಟ ಆರೋಪ ಕೇಳಿ ಬಂದಿತ್ತು. ಈ ವಿವಾದದ ಬಳಿಕ ಶಿಕ್ಷಣ ಇಲಾಖೆಯು ರಾಮಕೃಷ್ಣ ಅವರು ಬರೆದ ಭಗತ್ ಸಿಂಗ ಪಾಠ ಸೇರಿಸಿತ್ತು. ಆದರೆ, ಅವರು ನಾನು ಬರೆದ ಲೇಖನವನ್ನು ಬಳಸಲು ನನ್ನ ಒಪ್ಪಿಗೆ ಇಲ್ಲ ಅಂತಿದ್ದಾರೆ.

ಇದನ್ನೂ ಓದಿ:'ಪಠ್ಯ ಪುಸ್ತಕಗಳು ಪಕ್ಷ ಪುಸ್ತಕಗಳಲ್ಲ': ಸಚಿವ ಬಿ.ಸಿ.ನಾಗೇಶ್‌ಗೆ ಬರಗೂರು ತಿರುಗೇಟು

ನಮ್ಮ ರಾಜ್ಯದ ಶಾಲೆಗಳ ಪಠ್ಯ ಪುಸ್ತಕಗಳ ಪರಿಷ್ಕರಣೆಯು ತೀರಾ ಅಪಾಯ ಮಾರ್ಗದಲ್ಲಿ ಸಾಗುತ್ತಿದೆ. ಅಬದ್ಧ ಮತ್ತು ಅವೈಚಾರಿಕ ಪ್ರಕ್ರಿಯೆಯಾಗಿ ಉಳಿದಿಲ್ಲ. ಶಿಕ್ಷಣ ಕೆಟ್ಟ ರಾಜಕೀಯಕ್ಕೆ ಗುರಿಮಾಡಲಾಗುತ್ತಿರುವುದು ಸರ್ವಥಾ ಕ್ಷಮಾರ್ಹವಲ್ಲ. ಮಕ್ಕಳಿಗೆ ವಿಷ ಉಣಿಸುವುದು ಬೌದ್ಧಿಕ ಕ್ಷೇತ್ರದಲ್ಲಿ ದುರಂತ ಅಂತಾ ಹೇಳಿರುವ ಅವರು, ಈ ಹಿನ್ನೆಲೆಯಲ್ಲಿ ನನ್ನ ಯಾವುದೇ ಬರಹವನ್ನು ಪಠ್ಯ ಪುಸ್ತಕದ ಪರಿಧಿಯಿಂದ ಹೊರಗಿಡುವುದು ಸೂಕ್ತ ಎಂದಿದ್ದಾರೆ. ನನ್ನ ಯಾವುದಾದರೂ ಬರಹವನ್ನು ಆಯ್ಕೆ ಮಾಡಿಕೊಂಡಿದ್ದರೆ, ಅದಕ್ಕೆ ನನ್ನ ಸಮ್ಮತಿ ಇರುವುದಿಲ್ಲ ಎಂದು ಸ್ಪಷ್ಟವಾಗಿ ಶಿಕ್ಷಣ ಇಲಾಖೆಗೆ ಪತ್ರ ಬರೆದು ತಿಳಿಸಿದ್ದಾರೆ.

ಇನ್ನೂ ಮಕ್ಕಳಿಗೆ ಸಿಗದ ಪಠ್ಯ ಪುಸ್ತಕ :ಈಗಾಗಲೇ ರಾಜ್ಯಾದ್ಯಂತ ಮೇ 16ರಿಂದ ಶಾಲೆ ತರಗತಿ ಶುರುವಾಗಿದೆ. ಭವಿಷ್ಯದ ಕನಸು ಕಾಣುತ್ತಿರುವ ಮಕ್ಕಳ ಕೈಗೆ ಪಠ್ಯ ಪುಸ್ತಕ ಇನ್ನೂ ಸಿಕ್ಕಿಲ್ಲ. ಈ ನಡುವೆ ಒಬ್ಬರ ಹಿಂದೆ ಒಬ್ಬರಂತೆ ನಮ್ಮ ಪಾಠ-ಪದ್ಯವನ್ನು ಕೈಬಿಡುವಂತೆ ಲೇಖಕರು, ಸಾಹಿತಿಗಳು ಶಿಕ್ಷಣ ಇಲಾಖೆಗೆ ಪತ್ರವನ್ನು ಬರೆಯುತ್ತಿದ್ದಾರೆ. ಇದನ್ನು ಯಾವ ರೀತಿಯಲ್ಲಿ ಬಗೆಹರಿಸಿ, ಮಕ್ಕಳ ಭವಿಷ್ಯಕ್ಕೆ ಶಿಕ್ಷಣ ಇಲಾಖೆಯ ಅಡಿಪಾಯ ಹಾಕುತ್ತದೋ ನೋಡಬೇಕಿದೆ.

ಯಾವ ತರಗತಿ ಪಠ್ಯ ಪರಿಷ್ಕರಣೆ?

  • 6ರಿಂದ 10ನೇ ತರಗತಿ - ಸಮಾಜ ವಿಜ್ಞಾನದ ಎಲ್ಲ ಮಾಧ್ಯಮಗಳು
  • 1ರಿಂದ 10ನೇ ತರಗತಿ- ಪ್ರಥಮ ಭಾಷೆ ಕನ್ನಡ(3ನೇ ತರಗತಿ ಹೊರತು ಪಡಿಸಿ)
  • 6, 8, 9ನೇ ತರಗತಿ- ಕನ್ನಡ ದ್ವಿತೀಯ ಭಾಷೆ
  • 7, 8, 9ನೇ ತರಗತಿ- ತೃತೀಯ ಭಾಷೆಯ ಎಲ್ಲ ಮಾಧ್ಯಮಗಳು

ಇದನ್ನೂ ಓದಿ:ಪಠ್ಯಕ್ರಮದಲ್ಲಿ ನನ್ನ ಬರಹ ಸೇರಿಸಬೇಡಿ : ಸಾಹಿತಿ ದೇವನೂರ ಮಹಾದೇವ

ABOUT THE AUTHOR

...view details