ಕರ್ನಾಟಕ

karnataka

ETV Bharat / state

ಸಂಚಾರಿ ನಿಯಮ ಉಲ್ಲಂಘಿಸಿದ್ರೆ ಪೊಲೀಸರಿಗೂ ಬೀಳುತ್ತೆ ದುಪ್ಪಟ್ಟು ದಂಡ! - ಸಂಚಾರಿ ನಿಯಮ ಉಲ್ಲಂಘನೆ

ಇನ್ನು ಮುಂದೆ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ ಕಟ್ಟಬೇಕೆಂದು ನಗರ ಸಂಚಾರ ವಿಭಾರಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಫರ್ಮಾನು ಹೊರಡಿಸಿದ್ದಾರೆ.

ಸಂಚಾರಿ ಪೊಲೀಸರು

By

Published : Sep 12, 2019, 8:23 PM IST

ಬೆಂಗಳೂರು:ಜನಸಾಮಾನ್ಯರಂತೆ ಇನ್ನು ಮುಂದೆ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ ಕಟ್ಟಬೇಕೆಂದು ನಗರ ಸಂಚಾರ ವಿಭಾರಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಫರ್ಮಾನು ಹೊರಡಿಸಿದ್ದಾರೆ.

ಇದಕ್ಕೆ ಪೂರಕವಾಗಿ ಸದಾಶಿವ ನಗರ ಪೊಲೀಸ್​ ಠಾಣೆಯ ಇನ್ಸ್​​​​ಪೆಕ್ಟರ್ ಶಿವಕುಮಾರ್​ ಅವರಿಗೆ ನಿಯೋಜಿಸಲಾಗಿದ್ದ ಸರ್ಕಾರಿ ವಾಹನ (ಕೆಎ-02-ಜಿ-1577) ಇಂದು ನೋ ಪಾರ್ಕಿಂಗ್​​​​ನಲ್ಲಿ ನಿಲುಗಡೆಯಾಗಿತ್ತು. ಇದನ್ನು ಗಮಸಿದ ಸಂಚಾರ ವಿಭಾಗದ ಆಯುಕ್ತರು ಟ್ರಾಫಿಕ್​ ಇನ್ಸ್​​ಪೆಕ್ಟರ್​ಗೆ 2 ಸಾವಿರ ರೂ. ದಂಡ ವಿಧಿಸಿ ಇನ್ಸ್​​ಪೆಕ್ಟರ್​​​ ಹಾಗೂ ಚಾಲಕ ಡಿ.ಎಸ್​.ನಾಗೇಂದ್ರ ವಿರುದ್ಧ ಇಲಾಖಾ ಶಿಸ್ತು ಕ್ರಮಕ್ಕೆ ಆದೇಶಿಸಿದ್ದಾರೆ.

ಸಂಚಾರಿ ನಿಯಮ ಉಲ್ಲಂಘನೆ ಮಾಡದಂತೆ ಸಾರ್ವಜನಿಕರಲ್ಲಿ ನಿಯಮ ಪಾಲಿಸಿ ಕಾನೂನು ಜಾರಿ ಮಾಡುವ ಹೊಣೆ ಪೊಲೀಸರ ಮೇಲಿದೆ. ಸಮವಸ್ತ್ರ ಧರಿಸಿರುವ ಪೊಲೀಸರೇ ಸಂಚಾರ ನಿಯಮ ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆ ತಿದ್ದುಪಡಿ-2019ರ ಕಲಂ 2010 ಬಿ ಅನ್ವಯ ದಂಡ ವಿಧಿಸಬಹುದಾಗಿದೆ.

ABOUT THE AUTHOR

...view details