ಕರ್ನಾಟಕ

karnataka

ETV Bharat / state

ದ್ವಿಚಕ್ರ ವಾಹನ ಓಡಿಸುವ ಜನರೆ ಒಂಚೂರು ಇತ್ತ ನೀವು ಕಿವಿಕೊಡಿ... ಈ ಹಾಡು ಕೇಳಿ ಹುಷಾರಾಗಿರಿ​​​! - Constable

ಕರ್ನಾಟಕ ರಾಜ್ಯ ಶ್ವಾನ ವಿಭಾಗದ ಕಾನ್​​ಸ್ಟೇಬಲ್ ಮೌಲಾಲಿ ಕೆ.‌ ಆಲಗೂರ ಎಂಬುವರು ಸಂಚಾರಿ ನಿಯಮ ಪಾಲಿಸುವಂತೆ ಹಾಗೂ ಉಲ್ಲಂಘನೆಯಿಂದ ಆಗಬಹುದಾದ ನಷ್ಟದ ಬಗ್ಗೆ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿ ಸಾಹಿತ್ಯ ರಚಿಸಿದ್ದಾರೆ.

ಸಂಚಾರಿ ನಿಯಮ ಪಾಲಿಸುವಂತೆ ಕಾನ್ ಸ್ಟೇಬಲ್​ನಿಂದ ಹೊಸ ಟ್ರಾಫಿಕ್ ಆಲ್ಬಂ ಸಾಂಗ್...

By

Published : Sep 15, 2019, 8:53 PM IST

ಬೆಂಗಳೂರು: ಸರಗಳ್ಳತನ, ಡ್ರಗ್ಸ್ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಿದ್ದಾಯ್ತು. ಇದೀಗ ಟ್ರಾಫಿಕ್ ರೂಲ್ಸ್​ ಬ್ರೇಕ್​ ಸರದಿ. ನಗರದಲ್ಲಿ ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಪೊಲೀಸ್ ಕಾನ್​​ಸ್ಟೇಬಲ್ ಒಬ್ಬರು ಸಾಹಿತ್ಯ ರಚಿಸಿ ವಿಡಿಯೋ ಸಾಂಗ್​​ ಮಾಡಿದ್ದಾರೆ.

ಸಂಚಾರಿ ನಿಯಮ ಪಾಲಿಸುವಂತೆ ಕಾನ್​​ಸ್ಟೇಬಲ್​ನಿಂದ ಹೊಸ ಟ್ರಾಫಿಕ್ ಜಾಗೃತಿ ಸಾಂಗ್

ಈ ಹಿಂದೆ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣೆಯ ಕಾನ್​​ಸ್ಟೇಬಲ್ ಸುಬ್ರಹ್ಮಣ್ಯ ಶಾನಬೋಗ ಎಂಬುವರು ಸರಗಳ್ಳತನ, ಡ್ರಗ್ಸ್ ನಿಯಂತ್ರಣ, ಮಹಿಳೆ ಹಾಗೂ ಮಕ್ಕಳ ಮೇಲಿನ ಶೋಷಣೆ ಬಗ್ಗೆ ಸಾಹಿತ್ಯ ರಚಿಸಿ ವಿಡಿಯೋ ಆಲ್ಬಂ ಮಾಡಿದ್ದರು. ಇದಾದ ಬಳಿಕ ಕರ್ನಾಟಕ ರಾಜ್ಯ ಶ್ವಾನ ವಿಭಾಗದ ಕಾನ್​​ಸ್ಟೇಬಲ್ ಮೌಲಾಲಿ ಕೆ.‌ ಆಲಗೂರ ಎಂಬುವರು ಸಂಚಾರಿ ನಿಯಮ ಪಾಲಿಸುವಂತೆ ಹಾಗೂ ಉಲ್ಲಂಘನೆಯಿಂದ ಆಗಬಹುದಾದ ನಷ್ಟದ ಬಗ್ಗೆ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿ ಸಾಹಿತ್ಯ ರಚಿಸಿದ್ದಾರೆ. ಈ ಹಾಡಿಗೆ ನವೀನ್ ರಂಜುಲಗಿ ಎಂ. ಎಂಬುವರು ದನಿ ನೀಡಿದ್ದಾರೆ.

ಮುಂಗಾರು ಮಳೆ ಚಿತ್ರ ಖ್ಯಾತಿಯ ಯೋಗರಾಜ್ ಭಟ್ ‌ನಿರ್ದೇಶನದಲ್ಲಿ ಪರಪಂಚ ಚಿತ್ರದಲ್ಲಿ ಹುಚ್ಚ ವೆಂಕಟ್ ಹಾಡಿದ್ದ ಹುಟ್ಟಿದ್ದ ಊರನು ಬಿಟ್ಟು ಬಂದ ಮೇಲೆ... ಕಂಪೋಸಿಂಗ್​ನಲ್ಲೇ ಹೊಸ ಟ್ರಾಫಿಕ್ ಸಾಂಗ್ ವಿಡಿಯೋ ಮಾಡಿದ್ದಾರೆ. ಮುಂದಿನ ವಾರದಲ್ಲಿ ಹಾಡು ಬಿಡುಗಡೆ ಮಾಡಲಾಗುವುದು ಎಂದು ಮೌಲಾಲಿ ಆಲಗೂರ ತಿಳಿಸಿದ್ದಾರೆ.

ABOUT THE AUTHOR

...view details