ಬೆಂಗಳೂರು:ಕೊರೊನಾ ವೈರಸ್ಗೆ ಯಾವಾಗ ಲಸಿಕೆ ಬರುತ್ತೆ? ಈ ಹಿಂದಿನಂತೆ ನೆಮ್ಮದಿಯ ದಿನಗಳು ಯಾವಾಗ ಅಂತ ಪ್ರಶ್ನೆಗಳ ಸರಮಾಲೆ ಕೇಳಿಬರುತ್ತಿದ್ದವು. ಇದೀಗ ಲಸಿಕೆ ಬರುವ ಕುರಿತು ಮಾಹಿತಿಯಿದ್ದು, ಅದರ ಹಂಚಿಕೆಗಾಗಿ ಹೊಸ ಸಾಫ್ಟ್‌ವೇರ್ ಸಿದ್ಧವಾಗುತ್ತಿದೆ.
ಕೇಂದ್ರದಿಂದ ರಾಜ್ಯಕ್ಕೆ ರಾಜ್ಯದಿಂದ ಜಿಲ್ಲಾ ಕೇಂದ್ರಗಳಿಗೆ ಲಸಿಕೆ ಹಂಚಿಕೆಗೆ ಹೊಸ ವ್ಯವಸ್ಥೆ ಮಾಡಲಾಗುತ್ತಿದೆ. ಹಂಚಿಕೆ ವಿಚಾರದಲ್ಲಿ ಲೋಪವಾಗದಂತೆ ಎಚ್ಚರ ವಹಿಸಿರುವ ಕೇಂದ್ರ ಆರೋಗ್ಯ ಇಲಾಖೆ, ಪ್ರತಿ ಜಿಲ್ಲಾವಾರು ಮಾಹಿತಿ ಕೂಡ ಕೇಂದ್ರ ತಂಡ ಪರಿಶೀಲಿಸಲಿದೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆಯಿಂದ ಸಿದ್ಧವಾಗುತ್ತಿದೆ. ಕೋವಿಡ್ ವಾಕ್ಸಿನ್ ಇಂಟೆಲಿಜೆನ್ಸ್ ನೆಟ್ವರ್ಕ್ (Covid vaccine intelligence network) ವ್ಯವಸ್ಥೆ, ಲಸಿಕೆ ಪಡೆಯುವವರ ಮಾಹಿತಿ ಕೂಡ ಇದೇ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು.