ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆ ಜನರ ಓಲೈಕೆಯ ದೃಷ್ಟಿಯಿಂದ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವು ಯೋಜನೆಗಳಿಗೆ ಅನುದಾನ ನೀಡುವ ಮೂಲಕ ಎಲ್ಲಾ ಸಮುದಾಯದ ಜನರ ಸೆಳೆಯಲು ಮುಂದಾಗಿದ್ದಾರೆ. ಗ್ರಾಮೀಣ, ಕೃಷಿ, ಆರೋಗ್ಯ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ಪ್ರಕಟಿಸಿದ್ದಾರೆ. ಈ ಮೂಲಕ ಹಲವು ಜನಪರ ಯೋಜನೆಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಇನ್ನು ಯಾವ ಯಾವ ಯೋಜನೆಗೆ ಎಷ್ಟು ಅನುದಾನ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ:45 ಸಾವಿರ ಸ್ವಸಹಾಯ ಗುಂಪುಗಳಿಗೆ 1800 ಕೋಟಿ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ಯೋಜನೆಯನ್ನು ಪರಿಚಯಿಸಲಾಗಿದ್ದು, 'ಗೃಹಿಣಿ ಶಕ್ತಿ; ಯೋಜನೆಗೆ ಘೋಷಣೆ ಮಾಡಲಾಗಿದೆ. ಅಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಯೋಜನೆಗೆ 1000 ಕೋಟಿ ಅನುದಾನ ನೀಡಲಾಗಿದೆ. 3538 ಅಂಗನವಾಡಿ ಸ್ಥಾಪನೆಗೆ 270 ಕೋಟಿ ಅನುದಾನ ಒದಗಿಸಲಾಗಿದೆ. ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾಸಿಕ 500 ರೂ.ಸಹಾಯಧನ ನೀಡಲಾಗಿದೆ. ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಗೆ 350 ಕೋಟಿ ಅನುದಾನ ನೀಡಲಾಗಿದೆ. ಆಸಿಡ್ ದಾಳಿ ಸಂತ್ರಸ್ಥ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಯರಿಗೆ ಗ್ರಾಚುಟಿ ನೀಡಲು 40 ಕೋಟಿ ಅನುದಾನ ನೀಡಲಾಗಿದ್ದು, ಒಟ್ಟಾರೆ ಮಕ್ಕಳ ಅಭ್ಯೂದಯಕ್ಕೆ 47,256 ಕೋಟಿ ಅನುದಾನ ನೀಡಲಾಗಿದೆ.
ನಮ್ಮ ನೆಲೆ ಹೊಸ ಯೋಜನೆ ಘೋಷಣೆ:ವಿಶೇಷ ಚೇತನರಿಗಾಗಿ ಸ್ವಚೇತನಾ ಯೋಜನೆಯಡಿ 5 ಸಾವಿರ ಅರ್ಹರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಕ್ಕೆ 50 ಕೋಟಿ ಅನುದಾನ ಮಾಡಲಾಗಿದೆಎಸ್ಸಿ ಎಸ್ಟಿ ಸಮುದಾಯದ ಅಭ್ಯೂದಯಕ್ಕೆ 30215 ಕೋಟಿ ಅನುದಾನ ನೀಡಲಾಗಿದ್ದು, ಹಿಂದುಳಿದ ವರ್ಗ ಸಮುದಾಯಗಳ ಮಠಗಳಿಗೆ ಶೈಕ್ಷಣಿಕ ಕಾರ್ಯಗಳಿಗಾಗಿ 1115 ಸಂಸ್ಥೆಗಳಿಗೆ 375 ಕೋಟಿ ಅನುದಾನ ಒದಗಿಸಲಾಗಿದೆ.