ಕರ್ನಾಟಕ

karnataka

ETV Bharat / state

ನವೆಂಬರ್​​ನಿಂದ ಆಡಳಿತ ಸುಧಾರಣಾ ಕ್ರಮಗಳು ಜಾರಿ; ಅನುಷ್ಠಾನವಾಗಲಿರುವ ಆಡಳಿತ ಸುಧಾರಣಾ ಕ್ರಮಗಳಿವು! - ಆಡಳಿತ ಸುಧಾರಣಾ ಕ್ರಮ

‌ಈಗಾಗಲೇ ಸಿಎಂ ನವೆಂಬರ್​ನಿಂದ ಆಡಳಿತ ಸುಧಾರಣಾ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿದ್ದಾರೆ. ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗ ಸಲ್ಲಿಕೆ ಮಾಡಿರುವ ಮೊದಲ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

state Govt
state Govt

By

Published : Sep 3, 2021, 1:32 AM IST

ಬೆಂಗಳೂರು: ರಾಜ್ಯ ಸರ್ಕಾರ ನವೆಂಬರ್​ ತಿಂಗಳಿನಿಂದ ಮಹತ್ವದ ಆಡಳಿತ ಸುಧಾರಣೆ ತರಲು ಮುಂದಾಗಿದೆ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಸರ್ಕಾರಕ್ಕೆ ವೆಚ್ಚ ಕಡಿತ ಅನಿವಾರ್ಯವಾಗಿದ್ದು, ಇದೀಗ ಆಡಳಿತ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.

ನವೆಂಬರ್​​ನಿಂದ ಜಾರಿಯಾಗಲಿರುವ ಆಡಳಿತ ಸುಧಾರಣೆಯ ವರದಿಯ ಕೆಲ ಶಿಫಾರಸುಗಳು ವರದಿ ಇಲ್ಲಿದೆ. ಈಗಾಗಲೇ ಪದೇ ಪದೆ ಲಾಕ್‌ಡೌನ್​ನಿಂದ ರಾಜ್ಯದ ಬೊಕ್ಕಸ ನೆಲಕಚ್ಚಿದೆ. ಆರ್ಥಿಕವಾಗಿ ಬಸವಳಿದಿರುವ ಸರ್ಕಾರಕ್ಕೆ ವೆಚ್ಚ ಕಡಿತ ಮಾಡುವುದು ಅನಿವಾರ್ಯವಾಗಿದೆ. ಆಡಳಿತ ಸುಧಾರಣೆ ಮೂಲಕ ವೆಚ್ಚ ಕಡಿತ ಮಾಡುವುದು ಬೊಮ್ಮಾಯಿ ಸರ್ಕಾರದ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ನವೆಂಬರ್​ತಿಂಗಳಿಂದ ಆಡಳಿತ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವ ಬಗ್ಗೆ ನಿರ್ಧರಿಸಿದೆ. ಆ ಮೂಲಕ ವೆಚ್ಚ ಕಡಿತ ಮಾಡಿ ಬಸವಳಿದಿರುವ ಬೊಕ್ಕಸ ನಿರ್ವಹಣೆಗೆ ಮುಂದಾಗಿದೆ.

‌ಈಗಾಗಲೇ ಸಿಎಂ ನವೆಂಬರ್​ನಿಂದ ಆಡಳಿತ ಸುಧಾರಣಾ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿದ್ದಾರೆ. ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗ ಸಲ್ಲಿಕೆ ಮಾಡಿರುವ ಮೊದಲ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಅದಕ್ಕಾಗಿ ಸಲಹಾ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ. ಸಮಿತಿಯ ಸಲಹೆಯಂತೆ ನವೆಂಬರ್​​ನಿಂದ ಆಡಳಿತ ಸುಧಾರಣೆಯ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿರಿ: ಗುಡ್​​ ನ್ಯೂಸ್​​... BBMP ವ್ಯಾಪ್ತಿಯಲ್ಲಿ ದಿನದ 12 ಗಂಟೆ ಲಸಿಕಾ ಕೇಂದ್ರ ಓಪನ್​​​​​​​​

ಜಾರಿಗೊಳ್ಳಲಿರುವ ಆಡಳಿತ ಸುಧಾರಣೆಯ ಕ್ರಮಗಳೇನು?

ನವೆಂಬರ್​ನಿಂದ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿರುವ ಕೆಲ ಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ ಹುದ್ದೆ ಕಡಿತದ ಶಿಫಾರಸು ಸ್ವೀಕರಿಸಲು ಸರ್ಕಾರ ನಿರ್ಧರಿಸಿದೆ. ಕಂದಾಯ ಇಲಾಖೆಯಲ್ಲಿ ಪ್ರಾದೇಶಿಕ ಆಯಕ್ತರ ಹುದ್ದೆ ರದ್ಧತಿ ಮಾಡುವುದು ಬಹುತೇಕ ಖಚಿತವಾಗಿದೆ. ಪ್ರಾದೇಶಿಕ ಆಯುಕ್ತರ ಹುದ್ದೆ ಬದಲಿಗೆ ಕಂದಾಯ ಆಯುಕ್ತರ ಹುದ್ದೆ ಸೃಷ್ಠಿಸಲಾಗುವುದು. ಕಂದಾಯ ಆಯುಕ್ತರ ಕಚೇರಿಗೆ ಉಳಿಸಿಕೊಳ್ಳಬಹುದಾದ ಅಥವಾ ರಚಿಸಬಹುದಾದ ಹುದ್ದೆಗಳನ್ನು ಹೊರತುಪಡಿಸಿ, ಒಟ್ಟು ಪ್ರಾದೇಶಿಕ ಆಯುಕ್ತರ ಕಚೇರಿಗಳಲ್ಲಿನ 378 ಹುದ್ದೆಗಳು ರದ್ಧಾಗಲಿವೆ. ಅದರಲ್ಲಿ 18 ಗುಂಪು ಎ ಹುದ್ದೆಗಳು, 12 ಗ್ರೂಪ್ ಬಿ ಹುದ್ದೆಗಳು. 311 ಗ್ರೂಪ್ ಸಿ ಹುದ್ದೆಗಳು ಮತ್ತು 47 ಗ್ರೂಪ್ ಡಿ ಹುದ್ದೆಗಳನ್ನು ರದ್ದಾಗುವುದು ಬಹುತೇಕ ಖಚಿತ.

ರದ್ದುಪಡಿಸಿದ ಹುದ್ದೆಗಳಲ್ಲಿರುವ ಅಧಿಕಾರಿಗಳು, ಸಿಬ್ಬಂದಿಗಳನ್ನು ತೀವ್ರ ಅವಶ್ಯವಿರುವ ತಾಲೂಕು, ಜಿಲ್ಲೆಗಳ ಕಚೇರಿಗಳಿಗೆ ವರ್ಗಾಯಿಸಲಾಗುತ್ತದೆ. ಪ್ರತಿ ನಾಲ್ಕು ಪ್ರಾದೇಶಿಕ ಆಯುಕ್ತಾಲಯದಲ್ಲಿ ತಲಾ 141 ಹುದ್ದೆಗಳಂತೆ ಒಟ್ಟು 564 ಹುದ್ದೆಗಳು ಮುಂಜೂರಾಗಿವೆ. ಕಂದಾಯ ಆಯುಕ್ತಾಲಯಕ್ಕೆ ಕೇವಲ 186 ಹುದ್ದೆಗಳನ್ನು ನೇಮಕ‌‌ ಮಾಡಲು ಚಿಂತನೆ ನಡೆದಿದೆ. ಅಟಲ್ ಜನಸ್ನೇಹಿ ಕೇಂದ್ರ (ಎಜೆಎಸ್​ಕೆ) ಏಕಗವಾಕ್ಷಿ ಏಜೆನ್ಸಿಯಾಗಿ ಮಾಡಿ ಎಲ್ಲಾ ಇಲಾಖೆಗಳ ಸುಮಾರು 800 ಸೇವೆಗಳನ್ನು ನಾಗರೀಕರಿಗೆ ಲಭ್ಯವಾಗುವಂತೆ ಮಾಡಲು ಆಯೋಗ ಶಿಫಾರಸು ಮಾಡಿದೆ. ಅದನ್ನು ಜಾರಿಗೊಳಿಸಲು ಗಂಭೀರ ಚಿಂತನೆ ನಡೆದಿದೆ. ಮೊಬೈಲ್ ಫೋನ್ ಮೂಲಕ ಎಲ್ಲಾ ರಾಜ್ಯ ಸರ್ಕಾರದ ಇ-ಸೇವೆಗಳು ಲಭ್ಯವಾಗುವಂತೆ ಮೊಬೈಲ್ ಆಪ್ ಅಭಿವೃದ್ಧಿಪಡಿಸಲು ಚಿಂತನೆ ನಡೆದಿದೆ. ಇನ್ನು ಎಜೆಎಸ್‌ಕೆ, ತಹಶೀಲ್ದಾರ್, ಎಡಿಎಲ್‌ಆರ್, ಸಬ್ ರಿಜಿಸ್ಟ್ರಾರ್‌ ಕಚೇರಿಗಳಿಂದ ಮೇಲ್ಪಟ್ಟ ಎಲ್ಲಾ ಕಚೇರಿಗಳಿಗೆ ಇ-ಆಫೀಸ್ ಕಡ್ಡಾಯಗೊಳಿಸುವ ಶಿಫಾರಸನ್ನು ಜಾರಿಗೊಳಿಸಲಾಗುತ್ತದೆ ಎನ್ನಲಾಗಿದೆ.

ಇತ್ತ ಸಾರಿಗೆ ಇಲಾಖೆಯಲ್ಲಿನ ಐಟಿ ನಿರ್ದೇಶಕರ ಎರಡು ಹುದ್ದೆಗಳಿವೆ (ಒಂದು ಕೆಎಸ್‌ಆರ್‌ಟಿಸಿಯಲ್ಲಿ ಮತ್ತೊಂದು ಬಿಎಂಟಿಸಿಯಲ್ಲಿ) ಒಂದು ಹುದ್ದೆಯನ್ನು ರದ್ದುಪಡಿಸಿ ಎರಡೂ ಐಟಿ ವ್ಯವಸ್ಥೆಗಳ ಉಸ್ತುವಾರಿಗೆ ಒಬ್ಬರನ್ನೇ ನಿರ್ದೇಶಕರನ್ನಾಗಿ ಮಾಡುವ ಚಿಂತನೆ ಇದೆ. ಪ್ರಸ್ತುತ ಆರ್‌ಟಿಒ ಸೇವೆಗಳಿಗೆ ನಾಗರೀಕರು ಕಾಗದದ ಅರ್ಜಿ ಮತ್ತು ಆನ್‌ಲೈನ್ ಅರ್ಜಿ ಎರಡರಲ್ಲೂ ಸಲ್ಲಿಸಲಾಗುತ್ತಿದೆ. ನಾಗರೀಕರಿಗೆ ಎಲ್ಲಾ ಆರ್‌ಟಿಒ ಸೇವೆಗಳನ್ನು ಕಾಗದರಹಿತವಾಗಿ ಮಾಡುವ ಸಾಧ್ಯತೆ ಇದೆ. ಹೆಚ್ಚಿನ ದಕ್ಷತೆಗಾಗಿ ಇ-ಆಫೀಸ್ ವ್ಯವಸ್ಥೆಯನ್ನು ಎಲ್ಲಾ ಆರ್‌ಟಿಒ ಕಚೇರಿಗಳು ಮತ್ತು ಸಾರಿಗೆ ಇಲಾಖೆ ಕಚೇರಿಗಳು ಬಳಸಲು ಸೂಚನೆ ನೀಡಲಾಗುತ್ತದೆ.

ABOUT THE AUTHOR

...view details