ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಲೂ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ, ಕೋವಿಡ್ ಲಕ್ಷಣ ಇದ್ದರೂ ಇಲ್ಲದೇ ಇದ್ದರೂ ರೋಗಿಗಳು ಬಂದಾಗ ದಾಖಲಾತಿ ನಿರಾಕರಿಸುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ.
ಕೋವಿಡ್ ಲಕ್ಷಣವಿದ್ದರೂ, ಇಲ್ಲದಿದ್ದರೂ ದಾಖಲಾತಿಗೆ ನಿರಾಕರಿಸುವಂತಿಲ್ಲ: ಆಸ್ಪತ್ರೆಗಳಿಗೆ ಸರ್ಕಾರದಿಂದ ಖಡಕ್ ಎಚ್ಚರಿಕೆ - Number of Covid infected
ಪಾಸಿಟಿವ್/ನೆಗಟಿವ್ ವರದಿ ತರುವಂತೆ ಒತ್ತಾಯಿಸದೇ ರೋಗಿಗಳು ನೀಡುವ ಎಸ್ಎಂಎಸ್/ವಾಟ್ಸಪ್ ಅಥವಾ ಆರೋಗ್ಯ ಸೇತು ವರದಿ ಇತ್ಯಾದಿಗಳ ಆಧಾರದ ಮೇಲೆ ಚಿಕಿತ್ಸೆ ಅಥವಾ ಪ್ರವೇಶ ನೀಡಬೇಕು ಎಂದು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಸರ್ಕಾರ ಆದೇಶಿಸಿದೆ.
ಸಂಗ್ರಹ ಚಿತ್ರ
ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದ್ದು ರೋಗಿಯು ಶುಲ್ಕ ಭರಿಸಲು ಸಿದ್ಧನಾಗಿದ್ದಲ್ಲಿ ರಾಜ್ಯದ ಯಾವುದೇ ಖಾಸಗಿ ವೈದ್ಯಕೀಯ ಸಂಸ್ಥೆಗಳು ಪ್ರವೇಶ ನಿರಾಕರಿಸುವಂತಿಲ್ಲ. ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೋವಿಡ್-ನಾನ್ ಕೋವಿಡ್ ರೋಗಿಗೆ ಪ್ರಯೋಗಾಲಯದಿಂದ ಪಾಸಿಟಿವ್/ನೆಗಟಿವ್ ವರದಿ ತರುವಂತೆ ಒತ್ತಾಯಿಸದೇ ರೋಗಿಗಳು ನೀಡುವ ಎಸ್ಎಂಎಸ್/ವಾಟ್ಸಪ್ ಅಥವಾ ಆರೋಗ್ಯ ಸೇತು ವರದಿ ಇತ್ಯಾದಿಗಳ ಆಧಾರದ ಮೇಲೆ ಚಿಕಿತ್ಸೆ ಅಥವಾ ಪ್ರವೇಶ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಆದೇಶಿಸಿದ್ದಾರೆ.