ಕರ್ನಾಟಕ

karnataka

ETV Bharat / state

ಆದಿಚುಂಚನಗಿರಿ ಮಠಕ್ಕೆ ಸೋಮಶೇಖರ್, ಬೈರತಿ ಭೇಟಿ

ಶಾಸಕರಾಗಿ ಆಯ್ಕೆಯಾದ ನಂತರ ಎಸ್.ಟಿ‌ ಸೋಮಶೇಖರ್ ಮತ್ತು ಬೈರತಿ ಬವರಾಜು ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದರು.

vijaynagar
ಆದಿಚುಂಚನಗಿರಿ ಮಠಕ್ಕೆ ನೂತನ ಶಾಸಕರು

By

Published : Dec 10, 2019, 11:55 AM IST

ಬೆಂಗಳೂರು: ಎಂಟಿಬಿ ನಾಗರಾಜ್ ಮತ್ತು ವಿಶ್ವನಾಥ್ ಸೋಲಿನ ನೋವು ತಂದಿದ್ರೂ ನಾವೆಲ್ಲರೂ ಅವರ ಪರವಾಗಿಯೇ ಇರಲಿದ್ದೇವೆ ಎಂದು ನೂತನ ಶಾಸಕ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

ಆದಿಚುಂಚನಗಿರಿ ಮಠಕ್ಕೆ ನೂತನ ಶಾಸಕರು

ಶಾಸಕರಾಗಿ ಆಯ್ಕೆಯಾದ ನಂತರ ಎಸ್.ಟಿ‌ ಸೋಮಶೇಖರ್ ಮತ್ತು ಬೈರತಿ ಬವರಾಜು ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದರು. ನಿರ್ಮಲಾನಂದ ಶ್ರೀಗಳನ್ನು ಭೇಟಿಯಾಗಿ‌ ಆಶೀರ್ವಾದ ಪಡೆದುಕೊಂಡರು. ನಂತರ ಮಾತನಾಡಿದ ಸೋಮಶೇಖರ್, ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಮುನಿರತ್ನ ವಿಚಾರದಲ್ಲಿ ಸಿಎಂ ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಮುನಿರತ್ನಗೆ ಅನ್ಯಾಯ ಆಗಲು ಬಿಡಲ್ಲ, ಎಂಟಿಬಿ, ವಿಶ್ವನಾಥ್ ಪರ ನಾವಿದ್ದೇವೆ ಎಲ್ಲ 15 ಶಾಸಕರೂ ಒಟ್ಟಾಗಿದ್ದೇವೆ ಎಂದ್ರು. ಶ್ರೀಗಳು ಬೆಂಗಳೂರು ಅಭಿವೃದ್ಧಿ ಗೆ ಶ್ರಮಿಸುವಂತೆ ಹರಸಿದ್ದಾರೆ. ಟ್ರಾಫಿಕ್ ಸೇರಿದಂತೆ ಪ್ರಮುಖ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಶ್ರೀಗಳು ಸೂಚಿಸಿದ್ದಾರೆ ಅದರಂತೆ ಮುನ್ನಡೆಯಲಿದ್ದೇವೆ ಎಂದರು.

ಆದಿಚುಂಚನಗಿರಿ ಮಠಕ್ಕೆ ನೂತನ ಶಾಸಕರು

ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಅದು ಅವರ ಪಕ್ಷದ ಆಂತರಿಕ ವಿಚಾರ. ಆದರೆ, ನಾವು ರಾಜೀನಾಮೆ ನೀಡಿದ್ದ ಎಲ್ಲ 15 ಜನರು ನಾಳೆ ಸಭೆ ಸೇರಲಿದ್ದೇವೆ ಎಂದರು.

ಬೈರತಿ ಬಸವರಾಜ್ ಮಾತನಾಡಿ, ಶ್ರೀಗಳ ಆಶೀರ್ವಾದ ಪಡೆಯಲು ನಾನು ಸೋಮಶೇಖರ್ ಬಂದಿದ್ದೇವೆ. ಎಂಟಿಬಿ ನಾಗರಾಜು ನನ್ನ ತಂದೆ ಸಮಾನರು. ಅವರ ಸೋಲು ನೋವು ತರಿಸಿದೆ, ಎಂಟಿಬಿ ನಾಗರಾಜ್ ಹಾಗೂ ವಿಶ್ವನಾಥ್ ಪರ ನಾವಿದ್ದೇವೆ ಎಂದರು. ನಗರಾಭಿವೃದ್ಧಿ ಖಾತೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೇಳಿದ್ದೇನೆ. ಅಂತಿಮವಾಗಿ ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದೇವೆ. ಅವರು ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸಲಿದ್ದೇನೆ ಎಂದರು.

ABOUT THE AUTHOR

...view details